ಕುನೋ ರಾಷ್ಟ್ರೀಯ ಉದ್ಯಾನದಲ್ಲಿ ʻತೇಜಸ್ʼ- 4 ತಿಂಗಳಲ್ಲಿ 7ನೇ ಚೀತಾ ಸಾವು!

ಬುಧವಾರ, 12 ಜುಲೈ 2023 (09:54 IST)
ಭೋಪಾಲ್ : ಮಧ್ಯಪ್ರದೇಶದ ರಾಷ್ಟ್ರೀಯ ಉದ್ಯಾನಕ್ಕೆ ಬಿಡಲಾಗಿದ್ದ ಚೀತಾಗಳ ಪೈಕಿ ʻತೇಜಸ್ʼ ಹೆಸರಿನ ಮತ್ತೊಂದು ಗಂಡು ಚೀತಾ ಸಾವನ್ನಪ್ಪಿದ್ದು, 4 ತಿಂಗಳಲ್ಲಿ ಇದು 7ನೇ ಪ್ರಕರಣವಾಗಿದೆ.
 
ಮಂಗಳವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಚಿರತೆಯ ಕತ್ತಿನ ಮೇಲ್ಭಾಗದಲ್ಲಿ ಗಾಯದ ಗುರುತುಗಳು ಕಂಡುಬಂದಿದೆ. ಇದನ್ನು ಗಮನಿಸಿದ ಮೇಲ್ವಿಚಾರಣಾ ತಂಡ ತಕ್ಷಣ ವೈದ್ಯರಿಗೆ ಮಾಹಿತಿ ನೀಡಿದೆ. ನಂತರ ವೈದ್ಯರು ಪ್ರಾಣಿಯನ್ನ ಪರೀಕ್ಷಿಸಿ ಚಿಕಿತ್ಸೆ ನೀಡುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ʻತೇಜಸ್ʼ ಮೃತಪಟ್ಟಿದೆ. ಕಳೇಬರವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ವರದಿ ಬಂದ ನಂತರ ನಿಖರ ಕಾರಣ ತಿಳಿಯಲಿದೆ ಎಂದು ಪ್ರಧಾನ ಅರಣ್ಯ ಸರಂಕ್ಷಣಾಧಿಕಾರಿ ಜೆ.ಎಸ್ ಚೌಹಾಣ್ ತಿಳಿಸಿದ್ದಾರೆ. 

ಕಳೆದ ಮಾರ್ಚ್ 27ರಂದು ಸಾಶಾ ಹೆಸರಿನ ಹೆಣ್ಣು ಚೀತಾ ಕಿಡ್ನಿ ಸೋಂಕಿನಿಂದ ಸಾವನ್ನಪ್ಪಿತ್ತು, ಏಪ್ರಿಲ್ 23ರಂದು ಉದಯ್ ಹೆಸರಿನ ಗಂಡು ಚೀತಾ ಶ್ವಾಸಕೋಶದ ವೈಫಲ್ಯದಿಂದ, ಮೇ 9ರಂದು ದಕ್ಷಾ0 ಹೆಸರಿನ ಹೆಣ್ಣು ಚೀತಾ ಬೇಟೆಯಾಡುವ ವೇಳೆ ಗಾಯಗೊಂಡು ಮೃತಪಟ್ಟಿತ್ತು. ಆ ನಂತರ ವಿವಿಧ ಕಾರಣದಿಂದ ಮೂರು ಚೀತಾ ಮರಿಗಳು ಮೃತಪಟ್ಟಿದ್ದವು. ಒಟ್ಟು 6 ಚೀತಾ ಸಾವನ್ನಪ್ಪಿದರೂ ಅರಣ್ಯ ಇಲಾಖೆ ಹಾಗೂ ಸರ್ಕಾರ ಆರೋಪಗಳನ್ನ ತಳ್ಳಿಹಾಕಿತ್ತು. ಇದೀಗ 7ನೇ ಚೀತಾ ಸಾವನ್ನಪ್ಪಿದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ