ಕುನೋ ನ್ಯಾಷನಲ್ ಪಾರ್ಕ್ನಲ್ಲಿ ಇನ್ನೆರಡು ಚೀತಾ ಮರಿಗಳ ಸಾವು !
ಈ ವರ್ಷದ ಮಾರ್ಚ್ 24ರಂದು ʻಜ್ವಾಲಾʼ ಎಂಬ ಚೀತಾ ನಾಲ್ಕು ಮರಿಗಳಿಗೆ ಜನ್ಮ ನೀಡಿತ್ತು. ಇನ್ನೊಂದು ಮರಿಯ ಸ್ಥಿತಿ ಕೂಡ ಚಿಂತಾಜನಕವಾಗಿದ್ದು ಅದರ ಮೇಲೆ ವೈದ್ಯರು ಸತತ ನಿಗಾ ಇರಿಸಿದ್ದಾರೆ.
ಹೆಚ್ಚಾಗಿ ಚೀತಾ ಮರಿಗಳು 8 ವಾರಗಳಾಗುತ್ತಲೇ ತಮ್ಮ ತಾಯಿಯ ಸುತ್ತ ಸದಾ ಇರುತ್ತವೆ. ಹಾಗೆಯೇ ಈ ಮರಿಗಳೂ ಇದ್ದವು. ಆದರೆ ಚಿರತೆ ತಜ್ಞರ ಪ್ರಕಾರ ಅಫ್ರಿಕಾದಲ್ಲಿ ಚೀತಾ ಮರಿಗಳ ಉಳಿವಿನ ಪ್ರಮಾಣ ತುಂಬಾ ಕಡಿಮೆಯಾಗಿದೆ. ಸತ್ತ ಮರಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.