ಭಾರತದಲ್ಲಿ ಆರಂಭವಾಗಲಿದೆ ಟೆಸ್ಲಾದ ಮೊದಲ ಕಚೇರಿ

ಶುಕ್ರವಾರ, 4 ಆಗಸ್ಟ್ 2023 (09:40 IST)
ಮುಂಬೈ : ಯುಎಸ್ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಎಲೋನ್ ಮಸ್ಕ್ ನಡುವಿನ ಭೇಟಿಯ ಒಂದು ತಿಂಗಳ ನಂತರ ಮಹತ್ವದ ಬೆಳವಣಿಗೆ ಕಂಡುಬಂದಿದೆ. ಟೆಸ್ಲಾ ಕಂಪನಿ ತನ್ನ ಶಾಖೆಯನ್ನ ತೆರೆಯಲು ಜಾಗ ಪಡೆದುಕೊಂಡಿದೆ.

ಟೆಸ್ಲಾ ಇಂಡಿಯಾ ಮೋಟಾರ್ ಮತ್ತು ಎನರ್ಜಿ ಪ್ರೈವೇಟ್ ಲಿಮಿಟೆಡ್ ಪುಣೆಯ ವಿಮಾನ ನಗರದಲ್ಲಿರುವ ಪಂಚಶೀಲ್ ಬ್ಯುಸಿನೆಸ್ ಪಾರ್ಕ್ನಲ್ಲಿ ಕಚೇರಿಗೆ ತೆರೆಯಲು ಸ್ಥಳವನ್ನ ಗುತ್ತಿಗೆ ಪಡೆದುಕೊಂಡಿದೆ.

ಇದು ಭಾರತದ ಮಾರುಕಟ್ಟೆಗೆ ಟೆಸ್ಲಾ ಎಲೆಕ್ಟ್ರಿಕ್ ವಾಹನ ಪ್ರವೇಶಕ್ಕೆ ದೊಡ್ಡ ಹೆಜ್ಜೆಯಾಗಿದೆ. ಈ ಹಿಂದೆ ಟೆಸ್ಲಾದ ಹಿರಿಯ ಅಧಿಕಾರಿಗಳು ಭಾರತದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನಾ ಘಟಕ ಸ್ಥಾಪಿಸುವ ಯೋಜನೆ ರೂಪಿಸಲು ಇನ್ವೆಸ್ಟ್ ಇಂಡಿಯಾದ ತಮ್ಮ ಸಹವರ್ತಿಗಳೊಂದಿಗೆ ಚರ್ಚಿಸಿದ್ದರು. 

ಮಾಹಿತಿಗಳ ಪ್ರಕಾರ, ಟೆಸ್ಲಾದ ಭಾರತೀಯ ಅಂಗಸಂಸ್ಥೆಯು ಪಂಚಶೀಲ್ ಬ್ಯುಸಿನೆಸ್ ಪಾರ್ಕ್ನಲ್ಲಿರುವ ಬಿ ವಿಂಗ್ನ ಮೊದಲ ಮಹಡಿಯಲ್ಲಿ 5,580 ಚದರ ಅಡಿ ಕಚೇರಿ ಸ್ಥಳಕ್ಕಾಗಿ ಟೇಬಲ್ಸ್ಪೇಸ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನೊಂದಿಗೆ 5 ವರ್ಷಗಳ ಗುತ್ತಿಗೆ ಪಡೆದುಕೊಂಡಿದೆ. ಒಪ್ಪಂದದ ಪ್ರಕಾರ 34.95 ಲಕ್ಷ ಭದ್ರತಾ ಠೇವಣಿಯೊಂದಿಗೆ ಮಾಸಿಕ 11.65 ಲಕ್ಷ ರೂ.ಗಳನ್ನು ಟೆಸ್ಲಾ ಸಂಸ್ಥೆ ಪಾವತಿಸಲಿದೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ