ರಾಮಮಂದಿರ ಶಿಲಾನ್ಯಾಸ ಹಿನ್ನಲೆ; ಕಾರ್ಯಕ್ರಮಕ್ಕಾಗಿ ಸಿದ್ಧವಾದ ವೇದಿಕೆ ಹೇಗಿದೆ ಗೊತ್ತಾ?
9 ಸ್ತಂಭ ಬಳಸಿಕೊಂಡು ವೇದಿಕೆ ನಿರ್ಮಾಣ ಮಾಡಲಾಗಿದ್ದು, ವೇದಿಕೆ ಕಂಬಗಳಿಗೆ ಕೇಸರಿ ಬಟ್ಟೆ ಸುತ್ತಲಾಗಿದೆ. ಅಂತರಕ್ಕಾಗಿ 2 ಪಟ್ಟು ಪೆಂಡಾಲ್ ಗಾತ್ರ ಹೆಚ್ಚಳ ಮಾಡಲಾಗಿದೆ. ವೇದಿಕೆಯ ಮುಂಭಾಗದಲ್ಲಿ ಎಲ್ ಇಡಿ ಸ್ಕ್ರೀನ್ ಇರಿಸಲಾಗಿದೆ. ಇದೇ ವೇದಿಕೆಯಲ್ಲಿ ವಿಶೇಷ ಪೂಜೆ ಕೈಂಕರ್ಯ ಮಾಡಲಾಗುವುದು . 40 ಕೆಜಿ ಬೆಳ್ಳಿ ಇಟ್ಟಿಗೆ ಇಟ್ಟು ಮೋದಿ ಶಿಲಾನ್ಯಾಸ ಮಾಡಿದ್ದು, ಕಾರ್ಯಕ್ರಮ ಎರಡೂವರೆ ಗಂಟೆ ನಡೆಯಲಿದೆ ಎನ್ನಲಾಗಿದೆ.