ಜ್ಯೋತಿ ಮದುವೆ ಮಾಡಲು ಪೋಷಕರು ವೆಬ್‌ಸೈಟ್‌ನಲ್ಲಿ ಮಗಳ ವಿವರವನ್ನು ದಾಖಲಿಸಿದ್ದರು. ಈ ವಿವರಗಳಿಂದ ಸಂಬಂಧ ಕೂಡಿಕೊಂಡು ಡಿಸೆಂಬರ್ 14ರಂದು ಮದುವೆಗೆ ನಿರ್ಣಯಿಸಲಾಗಿತ್ತು. ಆದರೆ, ಮದುವೆಯ ಮುನ್ನ ನಡೆದ ಆರತಕ್ಷತೆ ಸಮಯದಲ್ಲಿ 15ಲಕ್ಷ ಹಾಗೂ ಕಾರಿಗೆ ಬೇಡಿಕೆಯಿಡಲಾಗಿದೆ. ಈ ಸಂದರ್ಭದಲ್ಲಿ ವರನೊಂದಿಗೆ ಮಾತನಾಡಿ ವಧು ಮದುವೆಯಾದ ನಂತರ ದುಡಿದರೆ ಹಣ ಸಂಪಾದನೆ ಮಾಡಿದರಾಯಿತು ಎಂದು ತಿಳಿಹೇಳಿಲು ಪ್ರಯತ್ನ ಕೂಡ ನಡೆಸಿದ್ದಾಳೆ.
ವರನ ಪೋಷಕರು ಮಾತ್ರ ಹಣ ನೀಡಿದರೆ ಮಾತ್ರ ಮದುವೆ ನಡೆಯುತ್ತದೆ ಎಂದು ಹೇಳಿದ್ದಾರೆ. ಇದರಿಂದ ತಂದೆಗೆ ಅವಮಾನ ಆಗುವುದನ್ನು ಸಹಿಸಲಾಗದೆ ವಧು ಮದುವೆಯನ್ನು ನಿರಾಕರಿಸಿ ವರ ಹಾಗೂ ಕುಟುಂಬದವರನ್ನು ಮದುವೆ ಮಂಟಪದಿಂದ ಹೊರ ನಡೆಯಲು ಸೂಚಿಸಿದ್ದಾಳೆ. ವಧುವಿನ ಕಾರ್ಯಕ್ಕೆ ಕುಟುಂಬದವರಿಂದ ಬೆಂಬಲ ವ್ಯಕ್ತವಾಗಿದ್ದು, ವಧುವಿನ ಹೇಳಿಕೆ ಪಡೆದಿರುವ ಪೊಲೀಸರು ವರದಕ್ಷೆಣೆ ಪ್ರಕರಣ ದಾಖಲು ಮಾಡಿದ್ದಾರೆ.