ಮುಂಬೈ : ರಸ್ತೆ ಅಪಘಾತದ ಗಲಾಟೆ ಪ್ರಕರಣದಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಅಪರಾಧಿ ಎಂದು ಘೋಷಿಸಿದ ಮಹಾರಾಷ್ಟ್ರದ ಮಾಲೆಗಾಂವ್ನ ಮ್ಯಾಜಿಸ್ಟ್ರೇಟ್ ಕೋರ್ಟ್ ಜೈಲು ಶಿಕ್ಷೆಗೆ ಬದಲಾಗಿ 21 ದಿನಗಳ ಕಾಲ ದಿನಕ್ಕೆ 5 ಬಾರಿ ನಮಾಜ್ ಮಾಡುವಂತೆ ಮತ್ತು ನಿತ್ಯ 2 ಸಸಿಗಳನ್ನು ನೆಟ್ಟು ಪೊಷಿಸುವಂತೆ ಸೂಚಿಸಿ ವಿಭಿನ್ನ ಆದೇಶ ಹೊರಡಿಸಿದೆ.
1958ರ ಅಪರಾಧಿಗಳ ಪ್ರೊಬೇಶನ್ ಆಕ್ಟ್ನ ಸೆಕ್ಷನ್ 3 ಅಪರಾಧವನ್ನು ಪುನರಾವರ್ತಿಸದಂತೆ ಎಚ್ಚರಿಕೆ ನೀಡಿ ಅಪರಾಧಿಯನ್ನು ಬಿಡುಗಡೆ ಮಾಡಲು ಮ್ಯಾಜಿಸ್ಟ್ರೇಟ್ಗೆ ಅಧಿಕಾರವನ್ನು ನೀಡುತ್ತದೆ ಇದರ ಅಡಿಯಲ್ಲಿ ಶಿಕ್ಷೆಯನ್ನು ಪ್ರಕಟಿಸಲಾಗಿದೆ ಎಂದು ಮ್ಯಾಜಿಸ್ಟ್ರೇಟ್ ತೇಜ್ವಂತ್ ಸಿಂಗ್ ಸಂಧು ಆದೇಶದಲ್ಲಿ ಹೇಳಿದ್ದಾರೆ.
ಕೇವಲ ಎಚ್ಚರಿಕೆ ಸಾಕಾಗುವುದಿಲ್ಲ ಮತ್ತು ಅಪರಾಧಿಯು ತನ್ನ ಕೃತ್ಯಗಳನ್ನು ಪುನರಾವರ್ತಿಸದಂತೆ ಎಚ್ಚರಿಕೆಯನ್ನು ಮತ್ತು ಅವನ ಅಪರಾಧವನ್ನು ನೆನಪಿಸಿಕೊಳ್ಳುವುದು ಮುಖ್ಯವಾಗಿದೆ. ಈ ಹಿನ್ನೆಲೆ ಮುಸ್ಲಿಂ ಧರ್ಮ ಆಚರಿಸುವ ವ್ಯಕ್ತಿಗೆ ನಮಾಜ್ ಮಾಡುವ ಹಾಗೂ ಸಸಿ ನಡುವೆ ಜವಬ್ದಾರಿ ನೀಡಿದೆ. ಇದರಿಂದ ಪ್ರತಿ ದಿನವೂ ಆತನಿಗೆ ತನ್ನ ತಪ್ಪಿನ ಅರಿವಾಗಲಿದೆ ಎಂದು ಮ್ಯಾಜಿಸ್ಟ್ರೇಟ್ ಅಭಿಪ್ರಾಯಪಟ್ಟಿದ್ದಾರೆ.