ಕೆನಡಾದಲ್ಲಿ ಅಭಿಮಾನಿಗಳಿಂದ ಅವಮಾನಕ್ಕೊಳಗಾದ ನಟಿ ಕತ್ರಿನಾ ಕೈಫ್
ಸೋಮವಾರ, 16 ಜುಲೈ 2018 (09:41 IST)
ಮುಂಬೈ : ಇತ್ತೀಚೆಗೆ ನಟ ಸಲ್ಮಾನ್ ಖಾನ್ ಜೊತೆ ನಟಿ ಕತ್ರಿನಾ ಕೈಫ್ ಅವರು 'ದ-ಬ್ಯಾಂಗ್' ಕಾನ್ಸರ್ಟ್ ಗಾಗಿ ಕೆನಡಾಗೆ ಹೋಗಿದ್ದಾಗ ಅಲ್ಲಿನ ಹುಡುಗಿಯರು ನಡುಬೀದಿಯಲ್ಲಿ ಕತ್ರಿನಾ ಕೈಫ್ ಅವರಿಗೆ ಅವಮಾನ ಮಾಡಿದ್ದಾರಂತೆ.
ನಟಿ ಕತ್ರಿನಾ ಕೈಫ್ ಅವರು ಕಾರ್ಯಕ್ರಮ ಮುಗಿಸಿಕೊಂಡು ಹೊರಗೆ ಬರುತ್ತಿರುವಾಗ ಅವರ ಜೊತೆ ಫೋಟೋ ತೆಗೆದುಕೊಳ್ಳಬೇಕು ಎಂದು ಆ ಹುಡುಗಿಯರು ಅಂದುಕೊಂಡಿದ್ದಾರಂತೆ. ಆದರೆ ಕತ್ರಿನಾ ಕಾರ್ಯಕ್ರಮದಲ್ಲಿ ತುಂಬಾ ಆಯಾಸಗೊಂಡಿದ್ದ ಕಾರಣ ಅವರು ಅಭಿಮಾನಿಗಳ ಜೊತೆ ಫೋಟೋ ಕ್ಲಿಕ್ಕಿಸಲು ಸ್ವಲ್ಪ ತಡ ಮಾಡಿದ್ದರಂತೆ. ಇದ್ದರಿಂದ ಯುವತಿಯರು ಕೋಪಗೊಂಡು ಅಲ್ಲಿಂದ ಹೊರಟು ಹೋದರಂತೆ. ನಂತರ ಕತ್ರಿನಾ ಹೋಟೆಲ್‍ನಿಂದ ಹೊರಬಂದು ತನ್ನ ಕಾರಿನ ಬಳಿ ಹೋಗುತ್ತಿದ್ದಾಗ ಯುವತಿಯರು ಕತ್ರಿನಾರನ್ನು ಹಿಂಬಾಲಿಸಿ ಅವಮಾನ ಮಾಡಿದ್ದಾರಂತೆ.
ಅಲ್ಲದೇ ಕತ್ರಿನಾ ಅಲ್ಲಿದ್ದ ಬೇರೆ ಅಭಿಮಾನಿಗಳ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ಆ ಯುವತಿಯರು ಕತ್ರಿನಾ ಬಗ್ಗೆ ಮತ್ತೆ ಕಮೆಂಟ್ ಮಾಡಿ ಅವಮಾನ ಮಾಡಿದ್ದಾರಂತೆ. ಕತ್ರಿನಾ ಅವರು ತಾಳ್ಮೆಯಿಂದ ಆ ಸಂದರ್ಭವನ್ನು ನಿಭಾಯಿಸಲು ಪ್ರಯತ್ನಿಸಿದರೂ ಆ ಹುಡುಗಿಯರು ಮಾತ್ರ ಅವರಿಗೆ ಅವಮಾನ ಮಾಡುತ್ತಲೇ ಇದ್ದರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ