ವಿವಾಹವಾಗುವುದಾಗಿ ನಂಬಿಸಿ ಪದೇ ಪದೇ ಅತ್ಯಾಚಾರ: ಕೇಸ್ ದಾಖಲು
ಶುಕ್ರವಾರ, 1 ಡಿಸೆಂಬರ್ 2023 (14:55 IST)
ಮದುವೆಯಾಗುವ ಭರವಸೆ ನೀಡಿ ಬಳಿಕ ಲೈಂಗಿಕತೆ ಹೊಂದಿ ಪದೇ ಪದೇ ಅತ್ಯಾಚಾರ ಮಾಡಿ ಇದೀಗ ಮದುವೆಯಾಗಲು ನಿರಾಕರಿಸುತ್ತಿದ್ದಾನೆ ಎಂದು ಮಹಿಳಾ ಪೇದೆಯೊಬ್ಬಳು ತನ್ನ ಹಿರಿಯ ಪೊಲೀಸ್ ಅಧಿಕಾರಿಯ ಮೇಲೆ ಆರೋಪಿಸಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ವಿವಾಹದ ನೆಪದಲ್ಲಿ ತನ್ನ ಮೇಲೆ ಮಾನಭಂಗ ಎಸಗಿದ್ದಾನೆ ಎಂದು 33 ವರ್ಷದ ಮಹಿಳಾ ಪೇದೆ ತನ್ನ ಹಿರಿಯ ಅಧಿಕಾರಿ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸ್ ಅಧಿಕಾರಿ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.
ಮಹಿಳಾ ಪೇದೆ ದೂರಿನ ಆಧಾರದ ಮೇಲೆ ಹಿರಿಯ ಅಧಿಕಾರಿ ವಿರುದ್ಧ ಮೋಸ ಮತ್ತು ಅತ್ಯಾಚಾರದ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ.