ಸುಮ್ಮನೆ ಕನ್ನಡ ಕನ್ನಡ ಎನ್ನೋರು ಮಕ್ಕಳಿಗೆ ಇಂಗ್ಲಿಷ್ ಕಲಿಸ್ತಿದ್ದಾರೆ ಎಂದ ಡಿಕೆಶಿ

ಗುರುವಾರ, 28 ಫೆಬ್ರವರಿ 2019 (21:41 IST)
ಮಕ್ಕಳ ಶಿಕ್ಷಣಕ್ಕಾಗಿಯೇ ಗ್ರಾಮೀಣ ಭಾಗದಿಂದ ನಗರಕ್ಕೆ ಬರೋರ ಸಂಖ್ಯೆ ಹೆಚ್ಚಾಗಿದೆ. ಗ್ರಾಮೀಣ ಭಾಗದ ಮಕ್ಕಳು ಇಂಗ್ಲಿಷ್ ಕಲಿಯಬೇಕು ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ಕೊಡಲು ಸರ್ಕಾರ ಮುಂದಾಗಿದೆ. ಹೀಗಾಗಿ ಪಬ್ಲಿಕ್ ಶಾಲೆಗಳನ್ನು ಹೋಬಳಿಗಳಲ್ಲಿ ನಿರ್ಮಿಸಲು ಸಿಎಂ ಹೆಚ್.ಡಿ. ಕುಮಾರಸ್ವಾಮಿ ಹೊರಟಿದ್ದಾರೆ ಎಂದಿದ್ದಾರೆ.

ಸುಮ್ಮನೆ ಕೆಲವರು ಕನ್ನಡ ಕನ್ನಡ ಅಂತಾರೆ. ತಮ್ಮ ಮಕ್ಕಳಿಗೆ ಇಂಗ್ಲಿಷ್ ಶಾಲೆಗೆ ಸೇರಿಸಿದ್ದಾರೆ. ಇಡೀ ವಿಶ್ವ ಬೆಂಗಳೂರನ್ನು ಕರ್ನಾಟಕವನ್ನು ನೋಡುತ್ತಿದ್ದಾರೆ. ಹೀಗಾಗಿ ನಮ್ಮ ಗ್ರಾಮೀಣಭಾಗದ ಮಕ್ಕಳು ಇಂಗ್ಲಿಷ್ ಕಲಿಯಬೇಕು.
120 ಕೋಟಿ ದೇಶದ ಜನಸಂಖ್ಯೆಯಲ್ಲಿ 160 ಕೋಟಿ ಮೊಬೈಲ್ ಯೂಸ್ ಆಗ್ತಿವೆ. ಹೀಗಾಗಿ ಹೀಗಾಗಿ ಇಂಗ್ಲಿಷ್‌ ಕಲಿಕೆ ಮುಖ್ಯವಾಗಿದೆ ಎಂದರು.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ