ಗರ್ಭಗುಡಿಗೆ ಚಿನ್ನದ ಲೇಪ ಬೇಡ ಎಂದು ಅರ್ಚಕರ ವಿರೋಧ?
ಇದು ಶತಮಾನಗಳಷ್ಟು ಹಳೆಯ ಸಂಪ್ರದಾಯವನ್ನು ಹಾಳು ಮಾಡುತ್ತಿದೆ ಎಂದು ಅರ್ಚಕರು ವಿರೋಧ ವ್ಯಕ್ತಪಡಿಸಿದ್ದಾರೆ.
ಕೇದಾರನಾಥ ದೇವಾಲಯದ ಗರ್ಭಗುಡಿಯಲ್ಲಿ ಗೋಡೆಯ ನಾಲ್ಕೂ ಬದಿಗಳಲ್ಲಿ ಬೆಳ್ಳಿಯ ತಟ್ಟೆಗಳಿಂದ ಮುಚ್ಚಲಾಗಿದೆ. ಇದೀಗ ಚಿನ್ನದ ಲೇಪವನ್ನು ಅಳವಡಿಸಲು ಈ ಬೆಳ್ಳಿಯ ತಟ್ಟೆಗಳನ್ನು ತೆಗೆಯಬೇಕಾಗುತ್ತದೆ.
ಚಿನ್ನದ ಲೇಪವನ್ನು ಹಾಕುವ ಪ್ರಕ್ರಿಯೆಯಲ್ಲಿ ದೊಡ್ಡ ಕೊರೆಯುವ ಯಂತ್ರಗಳನ್ನು ಬಳಸಲಾಗುತ್ತದೆ. ಇವುಗಳಿಂದ ದೇವಾಲಯದ ಗೋಡೆಗೆ ಹಾನಿಯಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.