ಡೆಹ್ರಾಡೂನ್ : ಕೇದಾರನಾಥ ಯಾತ್ರಾರ್ಥಿಗಳಿಗೆ ರಿಲಯನ್ಸ್ ಜಿಯೋ ಗುಡ್ ನ್ಯೂಸ್ ನೀಡಿದೆ.
ಗೌರಿಕುಂಡ ಮತ್ತು ಕೇದಾರನಾಥ ನಡುವಿನ ಮಾರ್ಗದಲ್ಲಿ ಮೊಬೈಲ್ ಹಾಗೂ ಡೇಟಾ ಸೇವೆಗಳನ್ನು ಒದಗಿಸಲು ರಿಲಯನ್ಸ್ ಜಿಯೋ ಮುಂದಾಗಿದೆ.
ರಿಲಯನ್ಸ್ ಜಿಯೋ ಗೌರಿಕುಂಡ ಮತ್ತು ಕೇದಾರನಾಥ ನಡುವಿನ ಮಾರ್ಗದಲ್ಲಿ ಮೊಬೈಲ್ ಮತ್ತು ಡೇಟಾ ಸೇವೆಗಳನ್ನು ಒದಗಿಸುತ್ತಿರುವ ಮೊದಲ ಟೆಲಿಕಾಂ ಆಪರೇಟರ್ ಆಗಿದೆ ಎಂದು ಕಂಪನಿಯು ತಿಳಿಸಿದೆ.
ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಸ್ಥಗಿತಗೊಂಡಿದ್ದ ಚಾರ್ ಧಾಮ್ ಯಾತ್ರೆ ಎರಡು ವರ್ಷಗಳ ಬಳಿಕ ಪುನರಾರಂಭಗೊಂಡಿದೆ. ಈ ವರ್ಷ ಹಿಮಾಲಯದ ಪುಣ್ಯಕ್ಷೇತ್ರಗಳಿಗೆ ಯಾತ್ರಾರ್ಥಿಗಳು ಭಾರೀ ಸಂಖ್ಯೆಯಲ್ಲಿ ಭೇಟಿ ನೀಡುತ್ತಿದ್ದಾರೆ ಎನ್ನಲಾಗಿದೆ.
ಗೌರಿಕುಂಡ ಮತ್ತು ಕೇದಾರನಾಥ ನಡುವೆ ಐದು ಟವರ್ಗಳನ್ನು ಸ್ಥಾಪಿಸುವ ಯೋಜನೆಗೆ ಅನುಗುಣವಾಗಿ ಸೋನ್ಪ್ರಯಾಗದಲ್ಲಿ ದೊಡ್ಡ ಟವರ್ ಸ್ಥಾಪಿಸಲಾಗಿದೆ ಎಂದು ರಿಲಯನ್ಸ್ ಜಿಯೋ ಸಂಸ್ಥೆ ಹೇಳಿದೆ.