ಮಗಳ ಅತ್ಯಾಚಾರ ಮಾಡಿದ ಆರೋಪಿಗಳಿಂದ ಹಣ ತೆಗೆದುಕೊಂಡ ತಾಯಿಯನ್ನು ಬಂಧಿಸಿದ ಪೊಲೀಸರು
ಸೋಮವಾರ, 7 ಜನವರಿ 2019 (07:50 IST)
ಹರಿಯಾಣ : ಮಗಳನ್ನು ಅತ್ಯಾಚಾರ ಮಾಡಿದ ಆರೋಪಿಗಳಿಂದ ಹಣ ತೆಗೆದುಕೊಂಡ ಕಾರಣಕ್ಕೆ ಮಹಿಳೆಯನ್ನು ಹಾಗೂ ಇಬ್ಬರು ಆರೋಪಿಗಳನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ.
ಅನಿತಾ(45) ಇಂತಹ ನೀಚ ಕೆಲಸ ಮಾಡಿದ ಮಹಾತಾಯಿ. ಅಜಯ್ ಹಾಗೂ ದಿಲ್ಬಾಗ್ ಸಿಂಗ್ ಬಂಧಿತ ಆರೋಪಿಗಳು. ಅನಿತಾ ತನ್ನ 15 ವರ್ಷದ ಮಗಳನ್ನು ಕರೆದುಕೊಂಡು ಮದುವೆ ಸಮಾರಂಭದಲ್ಲಿ ಫಾಲ್ಗೊಳ್ಳಲು ತೆರಳಿದಾಗ ಅಲ್ಲಿ ಅಜಯ್ ಎಂಬಾತನನ್ನು ಭೇಟಿ ಮಾಡಿದ್ದಾಳೆ. ಮೂರು ವರ್ಷಗಳಿಂದ ಪರಿಚಯನಾಗಿದ್ದ ಅಜಯ್ ಜೊತೆಗೆ ತನ್ನ ಮಗಳನ್ನು ಕಳುಹಿಸಿದ್ದಾಳೆ. ಆದರೆ ಅಜಯ್ ತನ್ನ ಮನೆಯಲ್ಲಿ ಮೂವರು ಸ್ನೇಹಿತರ ಜೊತೆ ಸೇರಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಮರುದಿನ ಅಜಯ್ ಸಂತ್ರಸ್ತೆಯ ಮನೆಗೆ ಬಂದು ತಾಯಿಗೆ 1000 ರೂ ನೀಡಿದ್ದಾನೆ. ಅಲ್ಲದೇ ಒಮ್ಮೆ ಚಾಲಕ ದಿಲ್ಬಾಗ್ ಸಿಂಗ್ ಎಂಬಾತನು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಈ ವಿಚಾರವನ್ನು ಬಾಲಕಿ ತನ್ನ ಚಿಕ್ಕಮ್ಮ ಬಳಿ ತಿಳಿಸಿದಾಗ ಆಕೆ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಡಿಸಿದ್ದಾಳೆ. ಆಗ ಬಾಲಕಿ 7 ತಿಂಗಳ ಗರ್ಭೀಣಿ ಎಂಬ ವಿಚಾರ ಬೆಳಕಿಗೆ ಬಂದಿದೆ. ನಂತರ ಬಾಲಕಿ ನಡೆದ ಘಟನೆಯನ್ನು ಪೊಲೀಸರಿಗೆ ತಿಳಿಸಿದ್ದಾಳೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) ಮತ್ತು ಮಕ್ಕಳ ರಕ್ಷಣೆ ಲೈಂಗಿಕ ದೌರ್ಜನ್ಯ (ಪಿಓಸಿಎಸ್ಒ) ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳಾದ ಬಾಲಕಿ ತಾಯಿ, ಅತ್ಯಾಚಾರ ಆರೋಪಿ ಅಜಯ್, ದಿಲ್ಬಾಗ್ ಸಿಂಗ್ ನನ್ನು ಬಂಧಿಸಿದ್ದು, ಉಳಿದ ಮೂವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.