ಮಹಿಳೆಯರು ತುಂಡು ಉಡುಪು ಧರಿಸಿದ್ರೆ ಮಾತ್ರ ಸಮಸ್ಯೆ ಆಗುತ್ತೆ : ಮಹಮೂದ್ ಅಲಿ

ಭಾನುವಾರ, 18 ಜೂನ್ 2023 (13:41 IST)
ಹೈದರಾಬಾದ್ : ತೆಲಂಗಾಣದ ಗೃಹ ಸಚಿವ ಮಹಮೂದ್ ಅಲಿಯವರು ಮಹಿಳೆಯರು ತುಂಡುಡುಗೆ ಧರಿಸಿದ್ರೆ ಮಾತ್ರ ಸಮಸ್ಯೆ ಆಗುತ್ತೆ ಎಂದು ಹೇಳಿದ್ದಾರೆ.
 
ಹೈದರಾಬಾದ್ ನ ಸಂತೋಷ್ ನಗರದಲ್ಲಿರುವ ಕೆವಿ ರಂಗಾರೆಡ್ಡಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರನ್ನು ಬುರ್ಕಾ ತೆಗೆದಿರಿಸಿ ಪರೀಕ್ಷೆ ಬರೆಯಲಾಗಿತ್ತು. ಈ ವಿಚಾರ ಅಲ್ಲಿ ಭಾರೀ ಚರ್ಚೆಗೀಡಾಗಿತ್ತು. ಈ ಸಂಬಂಧ ಕೆಲ ವಿದ್ಯಾರ್ಥಿನಿಯರು ಕಾಲೇಜಿನ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಈ ಮಧ್ಯೆ ಗೃಹ ಸಚಿವರು ಕೂಡ ಪ್ರತಿಕ್ರಿಯಿಸಿ, ಮಹಿಳೆಯರು ಸಾಧ್ಯವಾದಷ್ಟು ದೇಹವನ್ನು ಮುಚ್ಚಿಕೊಂಡು ಬರಬೇಕು. ಮಹಿಳೆಯರು ಧರಿಸುವ ಸಣ್ಣ ಸಣ್ಣ ಉಡುಪುಗಳಿಂದ ಮಾತ್ರ ಸಮಸ್ಯೆಯಾಗುತ್ತದೆ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ