ಮೈತ್ರಿ ಸರ್ಕಾರ ರಚಿಸಲು ಮುಂದಾದ ಶಿವಸೇನಾ, ಕಾಂಗ್ರೆಸ್, ಎನ್ ಸಿಪಿಗೆ ಎದುರಾಗಿದೆ ಈ ಸಂಕಷ್ಟ
ಶನಿವಾರ, 23 ನವೆಂಬರ್ 2019 (07:05 IST)
ನವದೆಹಲಿ : ಮಹಾರಾಷ್ಟ್ರದಲ್ಲಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಮುಂದಾದ ಶಿವಸೇನಾ, ಕಾಂಗ್ರೆಸ್, ಎನ್ ಸಿಪಿ ಪಕ್ಷಗಳಿಗೆ ಇದೀಗ ಸಂಕಷ್ಟವೊಂದು ಎದುರಾಗಿದೆ.
ಹೌದು. ಶಿವಸೇನಾ, ಕಾಂಗ್ರೆಸ್, ಎನ್ ಸಿಪಿ ಪಕ್ಷಗಳು ಮಾಡಿಕೊಂಡಿರುವ ಮೈತ್ರಿ ಅನೈತಿಕವಾಗಿದೆ. ಈ ಮೈತ್ರಿಕೂಟದ ಸರ್ಕಾರ ರಚನೆಯಾಗದಂತೆ ತಡೆ ನೀಡುವಂತೆ ಕೋರಿ ಬಿಜೆಪಿ ಕಾರ್ಯಕರ್ತರೊಬ್ಬರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.
ಬಿಜೆಪಿ ಕಾರ್ಯಕರ್ತ ಸುರೇಂದ್ರ ಬಹದೂರ್ ಸಿಂಗ್ ಎಂಬುವವರು ಈ ದೂರು ನೀಡಿದ್ದು, ಶಿವಸೇನೆ ಹಾಗೂ ಬಿಜೆಪಿ ಒಟ್ಟಾಗಿ ಕಾಂಗ್ರೆಸ್ ಎನ್ ಸಿಪಿ ವಿರುದ್ಧ ಚುನಾವಣೆ ಪ್ರಚಾರ ಮಾಡಿ ಜನಾದೇಶ ಪಡೆದುಕೊಂಡಿವೆ. ಆದರೆ ಇದೀಗ ಶಿವಸೇನೆ, ಬಿಜೆಪಿ ಬಿಟ್ಟು ಕಾಂಗ್ರೆಸ್, ಎನ್ ಸಿಪಿ ಜೊತೆ ಮೈತ್ರಿ ಮಾಡಿಕೊಳ್ಳುವುದರ ಮೂಲಕ ಜನಾದೇಶಕ್ಕೆ ಅಗೌರವ ತೋರಿವೆ. ಆದ್ದರಿಂದ ಈ ಮೈತ್ರಿ ಸರ್ಕಾರ ರಚಿಸದಂತೆ ರಾಜ್ಯಪಾಲರಿಗೆ ನಿರ್ದೇಶನ ನೀಡಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.