ಹರಿಯಾಣ: ಕೂದಲು ಕಟ್ ಮಾಡಿ ಎಂದ ಪ್ರಾಂಶುಪಾಲರನ್ನೇ ಚಾಕುವಿನಿಂದ ಇರಿದು ಕೊಂದ ವಿದ್ಯಾರ್ಥಿಗಳು

Sampriya

ಗುರುವಾರ, 10 ಜುಲೈ 2025 (20:07 IST)
ಹಿಸಾರ್: ಶಾಲೆಯಲ್ಲಿ ಶಿಸ್ತು ಕಾಪಾಡಿಕೊಳ್ಳಲು, ಕೂದಲನ್ನು ಕಟ್ ಮಾಡಿಸೋಕೆ  ಹೇಳಿದ ಪ್ರಾಂಶುಪಾಲರನ್ನೇ ಇರಿದು ಕೊಂದ ಘಟನೆ ಹರಿಯಾಣದಲ್ಲಿ ವರದಿಯಾಗಿದೆ. 

ಎಸ್ಪಿ ಯಶ್ವರ್ಧನ್ ಎಎನ್‌ಐಗೆ ಮಾತನಾಡಿ, “ಕೂದಲು ಕಟ್ ಮಾಡಿ, ಶಿಸ್ತನ್ನು ಕಾಪಾಡಿಕೊಳ್ಳುವಂತೆ ಮಕ್ಕಳಿಗೆ ಪ್ರಾಂಶುಪಾಲರು ಹೇಳಿದ್ದರಿಂದ ಕೋಪಗೊಂಡ ನಾರ್ನಾಂಡ್ ಪಟ್ಟಣದ ಕರ್ತಾರ್ ಸ್ಮಾರಕ ಶಾಲೆಯ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳು ತಮ್ಮ ಶಾಲೆಯ ಪ್ರಿನ್ಸಿಪಾಲ್‌ಗೆ ಚಾಕುವಿನಿಂದ ಇರಿದು ಕೊಂದಿದ್ದಾರೆ.

ಪ್ರಾಂಶುಪಾಲ ಜಗ್ಬೀರ್ ಸಿಂಗ್ (50) ಅವರನ್ನು ಇಂದು ಬೆಳಿಗ್ಗೆ 10.30 ರ ಸುಮಾರಿಗೆ ಇರಿದಿದ್ದಾರೆ. ದಾಳಿಯಲ್ಲಿ ಅವರು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಘಾತಕಾರಿ ಘಟನೆಯು ಕ್ಯಾಂಪಸ್‌ನಲ್ಲಿ ಭೀತಿಯನ್ನುಂಟುಮಾಡಿದೆ.

ಪ್ರಕರಣದಲ್ಲಿ ಆರೋಪಿಗಳಾಗಿರುವ ಅಪ್ರಾಪ್ತರನ್ನು ಇನ್ನೂ ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ