ಪ್ರಿಯಕರನ ನೆರವಿನಿಂದ ಪತಿಯನ್ನೇ ತುಂಡು ತುಂಡಾಗಿ ಕತ್ತರಿಸಿದ ಪತ್ನಿ

ಗುರುವಾರ, 30 ನವೆಂಬರ್ 2023 (10:02 IST)
ಅನೈತಿಕ ಸಂಬಂಧ ಯಾವತ್ತೂ ಕೆಟ್ಟದ್ದು ಎಂದು ಗೊತ್ತಿದ್ದರೂ ಕೂಡಾ ಪದೇ ಪದೇ ಅದೇ ಸಹವಾಸ ಮಾಡುವವರಿಗೆ ಇಲ್ಲಿಯ ಘಟನೆ ಬೆಚ್ಚಿ ಬೀಳಿಸುವಂತಹದಾಗಿದೆ. ತನ್ನ ಅನೈತಿಕ ಸುಖಕ್ಕಾಗಿ ತಾಳಿ ಕಟ್ಟಿದ ಪತಿಯನ್ನೇ ಪ್ರಿಯಕರನ ನೆರವಿನೊಂದಿಗೆ ಹತ್ಯೆ ಮಾಡಿದ ಘಟನೆ ವರದಿಯಾಗಿದೆ.
 
ಪ್ರಿಯಕರನೊಂದಿಗೆ ಸೇರಿ ಪತಿಯನ್ನು ಬೆತ್ತಲೆಗೊಳಿಸಿದ್ದಲ್ಲದೇ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಹತ್ಯೆಗೈದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಕಾಲೋನಿಯ ಹೊರಭಾಗದಲ್ಲಿ ಕೆಟ್ಟ ವಾಸನೆ ಬರುತ್ತಿದೆ ಎನ್ನುವ ನಿವಾಸಿಗಳ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದಾಗ ವ್ಯಕ್ತಿಯೊಬ್ಬನ ಮೃತ ದೇಹ ಪತ್ತೆಯಾಗಿದೆ.
 
ಪತ್ನಿ ಭಾರತಿ ಪ್ರಿಯಕರ ಸೂರ್ಯನೊಂದಿಗೆ ಅನೈತಿಕ ಸಂಬಂಧವಿರಿಸಿಕೊಂಡಿರುವ ಬಗ್ಗೆ ಹಲವಾರು ಬಾರಿ ಪತಿ ಪತ್ನಿಗೆ ಎಚ್ಚರಿಕೆ ನೀಡಿದ್ದರೂ ಆಕೆ ಕ್ಯಾರೆ ಎಂದಿರಲಿಲ್ಲ. ಪ್ರತಿನಿತ್ಯ ಪತಿ ಮತ್ತು ಪತ್ನಿಯ ಮಧ್ಯೆ ವಾಗ್ವಾದ ನಡೆದಿತ್ತು. ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ನಿವಾರಿಸಬೇಕು ಎನ್ನುವ ಉದ್ದೇಶದಿಂದ ಪ್ರಿಯಕರನ ಬೆಂಬಲ ಪಡೆದು ಹತ್ಯೆ ಮಾಡಿದ್ದಾಳೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಮೃತ ವ್ಯಕ್ತಿ  ವಾನಿಯಾ ಪತ್ನಿ ಭಾರತಿ ವಾನಿಯಾ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಿದ್ದು, ಇಬ್ಬರು ಸೇರಿ ಹತ್ಯೆ ಎಸಗಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
 
ಆರೋಪಿ ಮಹಿಳೆ ತನ್ನ ಪ್ರಿಯಕರನಿಗೆ ಕರೆ ಮಾಡಿ ಮನೆಗೆ ಕರೆಸಿಕೊಂಡು ನಂತರ ಪತಿಯನ್ನು ಮನಬಂದಂತೆ ಥಳಿಸಿ ಹತ್ಯೆ ಮಾಡಿದ್ದಾರೆ. ನಂತರ ಮೃತ ವ್ಯಕ್ತಿಯ ದೇಹವನ್ನು ಸುಲಭವಾಗಿ ಹೊರಗಡೆ ಸಾಗಿಸಲು ತುಂಡು ತುಂಡಾಗಿ ಕತ್ತರಿಸಿ ಕಸದ ಗುಂಡಿಯಲ್ಲಿ ಎಸೆದಿದ್ದಾರೆ.
 
ಪೊಲೀಸರು ಪ್ರಕರಣದ ಬಗ್ಗೆ ತನಿಖೆ ನಡೆಸಿದಾಗ ಪ್ರಿಯಕರ  ಪ್ರಕಾಶ್ ಸಹಾಯದೊಂದಿಗೆ ಪತಿಯನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾಳೆ. ಮೃತ ದೇಹವನ್ನು ಸುಲಭವಾಗಿ ಸಾಗಿಸಲು ತುಂಡು ತುಂಡಾಗಿ ಕತ್ತರಿಸಿದ್ದಾಗಿ ಹೇಳಿದ್ದಾಳೆ. ಆರೋಪಿಗಳಾದ  ವಾನಿಯಾ ಮತ್ತು ಆಕೆಯ ಪ್ರಿಯಕರ ಪ್ರಕಾಶ್ ವಿರುದ್ಧ ಹತ್ಯೆ ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿ ನ್ಯಾಯಾಂಗದ ವಶಕ್ಕೆ ಒಪ್ಪಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ