ನವದೆಹಲಿ : ಅಂಫಾನ್ ಚಂಡಮಾರುತದ ಬಗ್ಗೆ ನಿಖರ ಮಾಹಿತಿಯನ್ನು ನೀಡಿದ ಭಾರತೀಯ ಹವಾಮಾನ ಇಲಾಖೆ(ಐಎಂಡಿ)ಯ ಬಗ್ಗೆ ವಿಶ್ವ ಹವಾಮಾನ ಸಂಸ್ಥೆ ಮೆಚ್ಚುಗೆ ವ್ಯಕ್ತಪಡಿಸಿದೆ.
ಈ ಬಗ್ಗೆ ಐಎಂಡಿಗೆ ಪತ್ರ ಬರೆದ ವಿಶ್ವ ಹವಾಮಾನ ಸಂಸ್ಥೆ, ಚಂಡಮಾರುತ ಯಾವಾಗ, ಯಾವ ಪ್ರದೇಶಕ್ಕೆ ಅಪ್ಪಳಿಸುತ್ತದೆ? ಅದರ ಪಥ? ವೇಗ ಹೇಗಿದೆ? ಎಂದು ನಿಖರವಾಗಿ ಊಹಿಸಿ ಮಾಹಿತಿ ನೀಡಿ ಭಾರೀ ಅನಾಹುತವನ್ನು ತಪ್ಪಿಸಿದೆ. ಐಎಂಡಿಯ ಸೇವೆ ನಮಗೆಲ್ಲ ಅತ್ಯುತ್ತಮ ಪಾಠ ಎಂದು ಶ್ಲಾಘಿಸಿದೆ.