ನವದೆಹಲಿ : ಆಗಸ್ಟ್ ನಂತರ ಶಾಲೆಗಳನ್ನು ಪ್ರಾರಂಭಿಸುವ ನಿರ್ಧಾರ ಮಾಡಿದ ಕೇಂದ್ರ ಸರ್ಕಾರ ಇದೀಗ 1 ವರ್ಷದ ಅವಧಿಗೆ 3 ತಿಂಗಳ ಪಠ್ಯಕ್ರಮಗಳನ್ನು ಇಳಿಕೆ ಮಾಡುವ ಚಿಂತನೆ ನಡೆಸಿದ್ದು, ಈ ಬಗ್ಗೆ ಶಿಕ್ಷಕರು ಸಲಹೆ ನೀಡುವಂತೆ ಮನವಿ ಮಾಡಿದೆ.
ಕೊರೊನಾ ಭೀತಿ ಹಿನ್ನಲೆಯಲ್ಲಿ 2020-2021 ರ ಶೈಕ್ಷಣಿಕ ವರ್ಷವನ್ನು ಆಗಸ್ಟ್ ಬಳಿಕ ಆರಂಭಿಸಲು ಸರ್ಕಾರ ನಿರ್ಧರಿಸಿದೆ. ಇದರಿಂದ ಪಠ್ಯ ಕ್ರಮಗಳು ಶಿಕ್ಷಕರಿಗೆ ಮತ್ತು ಮಕ್ಕಳಿಗೆ ಹೊರೆಯಾಗಲಿದೆ ಎಂಬ ಕಾರಣಕ್ಕೆ ಪೋಷಕರು ಶಾಲಾ ಸಮಯವನ್ನು ಹಾಗೂ ಪಠ್ಯ ಕ್ರಮಗಳನ್ನು ಇಳಿಕೆ ಮಾಡುವಂತೆ ಮನವಿ ಮಾಡಿದ್ದಾರೆ.
ಈ ಮನವಿಗೆ ಸ್ಪಂದಿಸಿದ ಸಚಿವ ರಮೇಶ್ ಪೋಖ್ರಿಯಾಲ್ , ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ಫೇಸ್ ಬುಕ್ ಹಾಗೂ ಟ್ವೀಟರ್ ಖಾತೆಗೆ ಟ್ಯಾಗ್ ಅಥವಾ ಕಮೆಂಟ್ ಮೂಲಕ ಪಠ್ಯ ಕ್ರಮ ಇಳಿಕೆ ಮಾಡುವ ಬಗ್ಗೆ ಸಲಹೆ, ಅಭಿಪ್ರಾಯ ನೀಡುವಂತೆ ಶಿಕ್ಷಕರು ಹಾಗೂ ಶಿಕ್ಷಣ ತಜ್ಞರಿಗೆ ಮನವಿ ಮಾಡಿದ್ದಾರೆ.