ಪ್ರಿಯತಮೆಯನ್ನು ಭೇಟಿ ಮಾಡಲು ಬಂದು ತನ್ನ ಮೂಗನ್ನೇ ಕಳೆದುಕೊಂಡ ಯುವಕ

ಬುಧವಾರ, 20 ಫೆಬ್ರವರಿ 2019 (06:40 IST)
ಗುಜರಾತ್ : ಪ್ರಿಯತಮೆಯನ್ನು ಭೇಟಿ ಮಾಡಲು ಮನೆಗೆ ಬಂದ ಯುವಕನೊಬ್ಬನ  ಮೂಗನ್ನು  ಪ್ರಿಯತಮೆ ಮನೆಯವರು ಕತ್ತರಿಸಿದ ಘಟನೆ ಗುಜರಾತ್ ನ ಅಮ್ರೆಲಿ ಜಿಲ್ಲೆಯಲ್ಲಿ ನಡೆದಿದೆ.


ಪ್ರಕಾಶ್ (23) ಹಲ್ಲೆಗೊಳಗಾದ ಆರೋಪಿ. ಪ್ರಕಾಶ್, ಪ್ರಿಯತಮೆ ಭೇಟಿಗೆ ಆಕೆ ಮನೆಗೆ ಬಂದಿದ್ದಾನೆ. ಈ ವೇಳೆ ಆತನನ್ನು ಹಿಡಿದ ಕುಟುಂಬಸ್ಥರು ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಆಕೆಯ ಚಿಕ್ಕಪ್ಪ ಯುವಕನ ಮೂಗನ್ನು ಕತ್ತರಿಸಿದ್ದಾನೆ.


ಘಟನೆಯ ನಂತರ ಯುವಕನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹುಡುಗಿ ತಂದೆ-ತಾಯಿ, ಚಿಕ್ಕಪ್ಪ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ