ವಿಷಾನಿಲ ಸೋರಿಕೆಯಾದಾಗ ನಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?

ಶುಕ್ರವಾರ, 8 ಮೇ 2020 (09:10 IST)
ಬೆಂಗಳೂರು: ವಿಶಾಖಪಟ್ಟಣದಲ್ಲಿ ನಿನ್ನೆ ನಡೆದ ಅನಿಲ ಸೋರಿಕೆ ಪ್ರಕರಣ ದೇಶದಲ್ಲಿ ಮತ್ತೆ ತಲ್ಲಣ ಮೂಡಿಸಿದೆ. ಮನುಷ್ಯರು ಮಾತ್ರವಲ್ಲದೇ ಪ್ರಾಣಿ, ಪಕ್ಷಿಗಳೂ ಪ್ರಾಣ ವಾಯುವಿಗಾಗಿ ಸಂಕಟ ಪಡುತ್ತಿರುವ ದೃಶ್ಯಗಳು ಆಘಾತವುಂಟು ಮಾಡಿದೆ.
Vizag


ವಿಷಾನಿಲ ಸೋರಿಕೆಯಾದಾಗ ನಾವು ಮಾಡಬಹುದಾದ ಮುನ್ನೆಚ್ಚರಿಕಾ ಕ್ರಮಗಳು ಏನು ಗೊತ್ತಾ? ಇಂತಹ ಸಂದರ್ಭದಲ್ಲಿ ಚೆನ್ನಾಗಿ ನೀರು ಕುಡಿಯಬೇಕು.

ಒಂದು ವೇಳೆ ಮನೆಯಲ್ಲೇ ಇದ್ದರೂ ಒದ್ದೆ ಬಟ್ಟೆ ಅಥವಾ ಮಾಸ್ಕ್ ಧರಿಸಿದರೆ ಉತ್ತಮ. ಕಣ್ಣುಗಳು ಉರಿಯುತ್ತಿದ್ದರೆ ಶುದ್ಧ ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳುತ್ತಿರಬೇಕು. ಚರ್ಮದಲ್ಲಿ ತುರಿಕೆಯ ಅನುಭವವಾಗುತ್ತಿದ್ದರೆ ಹುಳಿ ಅಂಶವಿರುವ ವಸ್ತುವಿನಿಂದ ಚೆನ್ನಾಗಿ ಮೈ ತೊಳೆದುಕೊಳ್ಳಿ. ಮುಖ್ಯವಾಗಿ ದೇಹದಲ್ಲಿ ವಿಷಾನಿಲದ ಪ್ರಭಾವ ಕಡಿಮೆ ಮಾಡಲು ಹಾಲು, ಬಾಳೆಹಣ್ಣು, ಬೆಲ್ಲ ಸೇವಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ