ನವಜಾತ ಶಿಶು ಬೆಚ್ಚಿಬೀಳುತ್ತಿದ್ದರೆ ಏನು ಮಾಡಬೇಕು ಗೊತ್ತಾ?
ಮಂಗಳವಾರ, 5 ಮೇ 2020 (09:16 IST)
ಬೆಂಗಳೂರು: ನವಜಾತ ಶಿಶುವಿನ ಆರೈಕೆ ವಿಚಾರದಲ್ಲಿ ಅಮ್ಮಂದಿರಿಗೆ ಅನೇಕ ಆತಂಕಗಳಿರುತ್ತವೆ. ನಿದ್ರೆಯಲ್ಲೇ ಮಗು ಪಕ್ಕನೇ ಬೆಚ್ಚಿಬಿದ್ದಂತಾಗುವುದು, ಅಳುವುದು ಮಾಡಿದರೆ ಅಮ್ಮನೇ ಅದಕ್ಕೆ ಪ್ರೀತಿಯ ಮುಲಾಮು ನೀಡಬಹುದು.
ಮಗುವನ್ನು ಆದಷ್ಟು ಅಮ್ಮನ ದೇಹಕ್ಕೆ ತಾಕಿದಂತೆ ಮಲಗಿಸಿ. ಮೆತ್ತಗೆ ಮಗುವಿನ ಅಂಗೈ ನಡುವೆ ಅಮ್ಮನ ಕೈ ಬೆರಳನ್ನಿಡಿ. ಇದರಿಂದ ಮಗು ಗಟ್ಟಿಯಾಗಿ ಬೆರಳು ಹಿಡಿದುಕೊಳ್ಳುತ್ತದೆ. ಅಂದರೆ ಅದಕ್ಕೆ ಒಂದು ರೀತಿಯ ಹಿತವಾದ, ಸುರಕ್ಷಿತ ಅನುಭೂತಿಯಾಗುತ್ತದೆ.
ಮಗು ಮಲಗಿಕೊಂಡಿರುವಾಗ ವಿಪರೀತ ಕರ್ಕಶ ಶಬ್ಧ ಮಾಡುವುದು, ಸಡನ್ ಆಗಿ ಶಬ್ಧ ಮಾಡುವುದು ಇತ್ಯಾದಿ ಮಾಡಬೇಡಿ. ಆದಷ್ಟು ಮಗು ಎಚ್ಚರವಾಗಿದ್ದಾಗಲೂ ಮೃದುವಾಗಿ ಮಾತನಾಡಿಸಿ. ದಿನಕ್ಕೊಮ್ಮೆ ತಪ್ಪದೇ ದೃಷ್ಟಿ ನಿವಾಳಿಸಿ!