ದಕ್ಷಿಣ ಏಷ್ಯಾದ ಅತೀ ಚಿಕ್ಕ ಮಗು ಈ ಮಾನುಷಿ...!!!

ಗುರುಮೂರ್ತಿ

ಗುರುವಾರ, 25 ಜನವರಿ 2018 (16:41 IST)
ಉದಯಪುರ ಮೂಲದ ದಂಪತಿಗಳಿಗೆ ಜನಿಸಿದ ಮಗು ಇದಾಗಿದ್ದು ಮಾನುಷಿ ಎಂದು ಹೆಸರಿಡಲಾಗಿದೆ, ಈ ಮಗು ಹುಟ್ಟಿದ ಸಂದರ್ಭದಲ್ಲಿ 400 ಗ್ರಾಂ ತೂಕ ಹೊಂದಿದ್ದು 6 ತಿಂಗಳಿಗೆ ಜನಿಸಿರುವುದು ವಿಶೇಷವಾಗಿದೆ. ಸಾಮಾನ್ಯವಾಗಿ ಹುಟ್ಟಿದ ಮಕ್ಕಳು 2 ರಿಂದ 3 ಕೇಜಿ ತೂಕವಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ ಆದರೆ ಈ ಮಗು ಅದಕ್ಕೆ ಭಿನ್ನವೆಂದೇ ಹೇಳಬಹುದು.
ಭಾರತ ಮತ್ತು ದಕ್ಷಿಣ ಏಷ್ಯಾಗೆ ಹೋಲಿಸಿದರೆ ಬದುಕಿರುವ ಅತೀ ಚಿಕ್ಕ ಮಕ್ಕಳಲ್ಲಿ ಇದೇ ಮೊದಲ ಮಗುವಾಗಿದ್ದು ಇದೀಗ ಈ ಮಗು ಆರೋಗ್ಯಯುತವಾಗಿದೆ. ಗರ್ಭಾವಸ್ಥೆಯಲ್ಲಿರುವ ಸಂದರ್ಭದಲ್ಲಿ ಮಾನುಷಿ ತಾಯಿಗೆ ಅಧಿಕ ರಕ್ತದೊತ್ತಡದ ತೊಂದರೆ ಆಗಿದ್ದು ಇದರಿಂದ ಭ್ರೂಣಕ್ಕೆ ರಕ್ತ ಸಂಪರ್ಕವು ನಿಂತ ಕಾರಣ ಸಿ- ಸೆಕ್ಷನ್ ಮಾಡುವ ಮೂಲಕ ಮಗುವನ್ನು 6 ತಿಂಗಳಿಗೆ ಹೊರತೆಗೆಯಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
 
ಈ ಮಗು ಹುಟ್ಟಿದ ಸಮಯದಲ್ಲಿ 8.6 ಇಂಚುಗಳಷ್ಟು ಉದ್ದವಿದ್ದು, ಮಾನುಷಿಯ ಪಾದ ಅವಳ ತಂದೆಯ ಹೆಬ್ಬೆರಳಿನಷ್ಟು ದಪ್ಪವಿತ್ತು ಎಂದು ಅವಳ ಪಾಲನೆ ಮಾಡುತ್ತಿದ್ದ ನರ್ಸ್ ತಿಳಿಸಿದ್ದಾರೆ. ಹುಟ್ಟಿದಾಗ ಹೃದಯ, ಕಿಡ್ನಿ, ಮೆದುಳು ಹಾಗೂ ದೇಹದ ಇತರ ಭಾಗವು ಬೆಳವಣಿಗೆಯ ಹಂತದಲ್ಲಿತ್ತು. ಅವಳು ಯಾವುದೇ ಆಹಾರವನ್ನು ತೆಗೆದುಕೊಳ್ಳುತ್ತಿರಲಿಲ್ಲ ಆದ ಕಾರಣ ಅವಳನ್ನು ಆಸ್ಪತ್ರೆಯಲ್ಲೇ ನಿಗಾ ಘಟಕದಲ್ಲಿ ಅವಳನ್ನು ಸುಮಾರು 6 ತಿಂಗಳುಗಳ ಕಾಲ ಇಟ್ಟುಕೊಂಡಿದ್ದು ಇತ್ತೀಚಿಗೆ ಬಿಡುಗಡೆ ಮಾಡಲಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.
 
ಇತ್ತೀಚಿಗೆ ಆಸ್ಪತ್ರೆಯಿಂದ ಹೊರ ಬಂದಿರುವ ಮಗುವಿನ ತೂಕ ಸುಮಾರು 2,400 ಗ್ರಾಂ ಇದ್ದು ದೇಹದ ಎಲ್ಲಾ ಭಾಗಗಳು ಸರಿಯಾಗಿ ಬೆಳವಣಿಗೆ ಹೊಂದಿದೆ. ಆರೋಗ್ಯವು ಉತ್ತಮವಾಗಿದ್ದು ಈಗ ಆಹಾರವನ್ನು ಜೀರ್ಣಿಸಿಕೊಳ್ಳುವ ಸಾಮರ್ಥ್ಯವನ್ನು ಮಗು ಹೊಂದಿದೆ ಎಂದು ಆಸ್ಪತ್ರೆ ವೈದ್ಯರು ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ