ನವದೆಹಲಿ: ನ್ಯಾಯಾಲಯದಲ್ಲಿ ನ್ಯಾಯ ತೀರ್ಮಾನ ಮಾಡುವ ನ್ಯಾಯಾಧೀಶರು ಏನು ತಾನೇ ರೆಕಾರ್ಡ್ ಮಾಡಲು ಸಾಧ್ಯ? ಹಾಗಂತ ನೀವಂದುಕೊಂಡರೆ ತಪ್ಪು!
ಮುಝಾಫರ್ ನಗರದ ನ್ಯಾಯಾಲಯದ ನ್ಯಾಯಾಧೀಶರು ದಾಖಲೆಯ ತೀರ್ಪು ನೀಡಿದ್ದಾರೆ. 327 ದಿನಗಳ ಅವಧಿಯಲ್ಲಿ ಬರೋಬ್ಬರಿ 6,065 ಪ್ರಕರಣದ ತೀರ್ಪಿತ್ತು ದಾಖಲೆ ನಿರ್ಮಿಸಿದ್ದಾರೆ.
ತೇಜ್ ಬಹದ್ದೂರ್ ಸಿಂಗ್ ಎಂಬುದು ಈ ನ್ಯಾಯಾಧೀಶರ ಹೆಸರು. ಹಲವು ಬಾಕಿಯಿರುವ ಪ್ರಕರಣಗಳನ್ನು ವಿಲೇವಾರಿ ನಡೆಸಿರುವ ನ್ಯಾಯಾಧೀಶರು ಗಿನ್ನೆಸ್ ಬುಕ್ ಗೆ ಎಂಟ್ರಿಯಾಗಿರುವುದು ದೃಢಪಟ್ಟಿದೆ.
ವಕೀಲರ ಸ್ಟ್ರೈಕ್ ಇದ್ದರೂ, ಇಷ್ಟೊಂದು ಪ್ರಕರಣಗಳನ್ನು ವಿಲೇವಾರಿ ನಡೆಸಿರುವ ಸಿಂಗ್ ಸಾಹಸಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಇಂತಹ ಸಾಧನೆಯನ್ನು ಇದುವರೆಗೆ ಯಾರೂ ಮಾಡಿಲ್ಲ ಎಂದು ಸಿಂಗ್ ಹೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ