ಅರುಣ್ ಜೇಟ್ಲಿ ಮಂತ್ರಿಯಾಗಲ್ಲ, ಅವರ ಬದಲು ವಿತ್ತ ಖಾತೆ ಈ ಬಾರಿ ಈ ಸಂಸದನಿಗೆ!

ಭಾನುವಾರ, 26 ಮೇ 2019 (09:08 IST)
ನವದೆಹಲಿ: ಅರುಣ್ ಜೇಟ್ಲಿ ಈ ಬಾರಿ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದಲ್ಲಿ ಸಚಿವಗಿರಿ ಪಡೆದುಕೊಳ್ಳುವುದಿಲ್ಲ. ಅದಕ್ಕೆ ಕಾರಣ ಆರೋಗ್ಯ ಸಮಸ್ಯೆ.


ಈ ಬಾರಿ ಚುನಾವಣೆಯಲ್ಲೂ ಸ್ಪರ್ಧಿಸದ ಅರುಣ್ ಜೇಟ್ಲಿ ರಾಜ್ಯಸಭೆ ಸದಸ್ಯತ್ವ ಇರುವುದರಿಂದ ಮಂತ್ರಿಯಾಗಬಹುದು ಎಂದು ಲೆಕ್ಕಾಚಾರ ಹಾಕಲಾಗಿತ್ತು. ಆದರೆ ಕಿಡ್ನಿ ಕಸಿ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಜೇಟ್ಲಿ ಆರೋಗ್ಯ ಸಮಸ್ಯೆ ಇರುವುದರಿದ ಮಂತ್ರಿ ಮಂಡಲದ ಭಾಗವಾಗದೇ ಇರಲು ತೀರ್ಮಾನಿಸಿದ್ದಾರೆ.

ವಾಜಪೇಯಿ ಸರಕಾರದ ಅವಧಿಯಿಂದಲೂ ಪ್ರಮುಖ ಖಾತೆಯನ್ನೇ ನಿರ್ವಹಿಸುತ್ತಿದ್ದ ಜೇಟ್ಲಿ ಸ್ಥಾನಕ್ಕೆ ಈ ಬಾರಿ ವಿತ್ತ ಸಚಿವರಾಗುವವರು ಯಾರು ಎಂಬ ಪ್ರಶ್ನೆಗೆ ಇದೀಗ ಸಂಭಾವ್ಯರೊಬ್ಬರ ಹೆಸರು ಕೇಳಿಬಂದಿದೆ.

ಅವರು ಪಿಯೂಷ್ ಗೋಯಲ್.  ಕಳೆದ ಬಾರಿಯೂ ಜೇಟ್ಲಿ ಅನಾರೋಗ್ಯದಿಂದ ಸಂಸತ್ ಗೆ ಬರಲಾಗದ ಸ್ಥಿತಿಯಲ್ಲಿದ್ದಾಗ ಇದೇ ಗೋಯಲ್ ವಿತ್ತ ಖಾತೆ ನಿಭಾಯಿಸಿದ್ದರು. ಹೀಗಾಗಿ ಈ ಬಾರಿ ಗೋಯಲ್ ಹೆಸರೇ ಈ ಪ್ರಮುಖ ಖಾತೆಗೆ ಕೇಳಿಬರುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ