ಲೋಕಸಭಾ ಸಮರ: ವಿರೋಧ ಪಕ್ಷಗಳನ್ನು ಒಗ್ಗೂಡಿಸುತ್ತಿರುವ ಚಂದ್ರಬಾಬು ನಾಯ್ಡು ಪ್ಲ್ಯಾನ್ ಬಹಿರಂಗ!

ಬುಧವಾರ, 22 ಮೇ 2019 (10:51 IST)
ನವದೆಹಲಿ: ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ಇನ್ನು ಒಂದೇ ದಿನ ಬಾಕಿಯಿದ್ದು, ವಿಪಕ್ಷಗಳನ್ನು ಒಗ್ಗೂಡಿಸುವಲ್ಲಿ ಬ್ಯುಸಿಯಾಗಿರುವ ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಯೋಜನೆ ಬಹಿರಂಗವಾಗಿದೆ.


ಜೆಡಿಎಸ್ ವರಿಷ್ಠ ದೇವೇಗೌಡ, ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ, ಮಾಯಾವತಿ, ರಾಹುಲ್ ಗಾಂಧಿ ಸೇರಿದಂತೆ ಯುಪಿಎ ಮತ್ತು ಮಿತ್ರ ಪಕ್ಷಗಳ ನಾಯಕರನ್ನು ಭೇಟಿಯಾಗುತ್ತಿರುವ ಚಂದ್ರಬಾಬು ನಾಯ್ಡು ಇದೀಗ ಸರ್ಕಾರ ರಚನೆಗೆ ಹೊಸ ಯೋಜನೆ ಸಿದ್ಧಪಡಿಸುತ್ತಿದ್ದಾರೆ.

ಒಂದು ವೇಳೆ ಎನ್ ಡಿಎ ಕೂಟಕ್ಕೆ ಬಹುಮತ ಬರಲು ಒಂದೆರಡು ಸೀಟ್ ಗಳ ಕೊರತೆ ಎದುರಾದರೂ ವಿಪಕ್ಷಗಳ ನೇತೃತ್ವದಲ್ಲಿ ಸರ್ಕಾರ ರಚನೆಗೆ ಹಕ್ಕು ಮಂಡಿಸಲು ಚಂದ್ರಬಾಬು ನಾಯ್ಡು ಎಲ್ಲಾ ನಾಯಕರ ಜತೆ ಮಾತುಕತೆ ನಡೆಸುತ್ತಿದ್ದಾರೆ ಎನ್ನಲಾಗಿದೆ. ಮೊದಲೇ ಮಾತುಕತೆ ನಡೆಸಿ ಯೋಜನೆ ಸಿದ್ಧಪಡಿಸಿಕೊಂಡರೆ ನಂತರ ಎನ್ ಡಿಎ ಇತರೆ ಸಂಸದರನ್ನು ಸೆಳೆದು ಸರ್ಕಾರ ರಚಿಸಲು ಅವಕಾಶ ಇರಲ್ಲ ಎನ್ನುವುದು ಚಂದ್ರಬಾಬು ನಾಯ್ಡು ಯೋಜನೆ. ಆದರೆ ಎಲ್ಲದಕ್ಕೂ ನಾಳೆಯವರೆಗೆ ಕಾಯಲೇಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ