ಕಾವೇರಿ'ದ' ತಮಿಳುನಾಡು ಬಂದ್: ಬೆಂಕಿ ಹಚ್ಚಿಕೊಂಡ ಯುವಕ

ಶುಕ್ರವಾರ, 16 ಸೆಪ್ಟಂಬರ್ 2016 (11:43 IST)
ಕಾವೇರಿ ನದಿ ನೀರು ವಿವಾದದ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ತಮಿಳರ ಮೇಲೆ ನಡೆದ ಹಲ್ಲೆಗಳನ್ನು ವಿರೋಧಿಸಿ ವಿರೋಧ ಪಕ್ಷಗಳು ಮತ್ತು ವ್ಯಾಪಾರಿ ಸಂಘಗಳು ಇಂದು ತಮಿಳುನಾಡು ಬಂದ್‌ಗೆ ಕರೆ ನೀಡಿವೆ.

ಬಂದ್ ಶಾಂತಯುತವಾಗಿ ಸಾಗುತ್ತಿದೆ. ಆದರೆ ಯುವಕನೊಬ್ಬ ಬೆಂಕಿ ಹಚ್ಚಿಕೊಂಡ ಬಗ್ಗೆ ವರದಿಯಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿಗಳು ಇನ್ನು ಲಭ್ಯವಾಗಬೇಕಿದೆ. 
 
ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ತನ್ನಿಂದ ಬಂದಿರುವ ಆದೇಶವನ್ನು ಪ್ರಶ್ನಿಸಿ ಬಂದ್ ಮಾಡಲು ಅವಕಾಶ ನೀಡಬೇಡಿ ಎಂದು ಸುಪ್ರೀಂಕೋರ್ಟ್ ಎರಡು ರಾಜ್ಯ ಸರ್ಕಾರಗಳಿಗೆ ಸೂಚಿಸಿರುವ ಮಧ್ಯೆ ಬಂದ್‌ಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ.  
 
ಪ್ರಮುಖ ವಿರೋಧ ಪಕ್ಷಗಳಾದ ಡಿಎಂಕೆ, ಕಾಂಗ್ರೆಸ್, ವಿಜಯ್ ಕಾಂತ್ ನೇತೃತ್ವದ ಡಿಎಂಡಿಕೆ, ತಮಿಳು ಮಾನಿಲ ಕಾಂಗ್ರೆಸ್, ಪಿಎಂಕೆ ಬಂದ್‌ಗೆ ಬೆಂಬಲ ನೀಡಿವೆ. ಆಡಳಿತಾರೂಡ ಎಐಡಿಎಂಕೆ ಬಂದ್‌ಗೆ ಬೆಂಬಲ ಸೂಚಿಸಿಲ್ಲ. 
 
ಕೆಲ ಖಾಸಗಿ ಶಾಲೆಗಳು ಬಂದ್ ನಿಮಿತ್ತ ರಜೆ ಘೋಷಿಸಿವೆ. ಆದರೆ ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ ಎಂದು ತಮಿಳುನಾಡು ಸರ್ಕಾರ ಸ್ಪಷ್ಟಪಡಿಸಿದೆ. 
 
4,500ಕ್ಕೂ ಪೆಟ್ರೋಲ್ ಬಂಕ್‌ಗಳ ಬಾಗಿಲು ಮುಚ್ಚಲಿವೆ ಎಂದು ಪೆಟ್ರೋಲ್ ಮಾಲೀಕರ ಸಂಘ ಹೇಳಿದೆ. ರಾಜ್ಯದಾದ್ಯಂತ 50,000ಕ್ಕೂ ಹೆಚ್ಚು ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ. 
 
ಕರ್ನಾಟಕದ ಮೂಲದ ಸಂಸ್ಥೆ, ಬ್ಯಾಂಕ್ ಮತ್ತು ಹೊಟೆಲ್‌ಗಳಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ