ತ್ರಿವಳಿ ತಲಾಕ್: ಮೋದಿಯನ್ನು ಹೊಗಳಿ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಮುಸ್ಲಿಂ ಮಹಿಳೆ

ಬುಧವಾರ, 19 ಏಪ್ರಿಲ್ 2017 (13:14 IST)
ತ್ರಿವಳಿ ತಲಾಕ್ ವಿವಾದ ಮುಂದುವರಿದಿರುವಂತೆಯೇ ಮುಸ್ಲಿಂ ಮಹಿಳೆಯೊಬ್ಬಳು ಪ್ರಧಾನಮಂತ್ರಿ ನರೇಂದ್ರ ಮೋದಿಯನ್ನು ಹೊಗಳಿ ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದಾಗಿ ಘೋಷಿಸಿದ್ದಾಳೆ.
 
ತ್ರಿವಳಿ ತಲಾಕ್‌ ಕುರಿತಂತೆ ಬದಲಾವಣೆ ತರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನಡೆಸುತ್ತಿರುವ ಪ್ರಯತ್ನವನ್ನು ಶ್ಲಾಘಿಸಿದ್ದಾಳೆ. 
 
ಮುಸ್ಲಿಂ ಸಮುದಾಯದಲ್ಲಿರುವ ತ್ರಿವಳಿ ತಲಾಕ್‌ ವ್ಯವಸ್ಥೆಯಿಂದ ಅನ್ಯಾಯ ಎದುರಿಸುವ ಬದಲು ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವುದು ಸೂಕ್ತ ಎಂದು ಉತ್ತರಾಖಂಡ್ ಮಹಿಳೆ ತಿಳಿಸಿದ್ದಾಳೆ.
 
ಉತ್ತರಾಖಂಡ್ ರಾಜ್ಯದ ಕಿಚ್ಚಾ ಪ್ರದೇಶದ ನಿವಾಸಿಯಾಗಿರುವ ಮಹಿಳೆ, ತ್ರಿವಳಿ ತಲಾಕ್‌ನಿಂದ ತೀವ್ರ ಆಕ್ರೋಶಗೊಂಡಿದ್ದಾಳೆ. ಆಕೆಯ ಸಹೋದರಿ ಕೂಡಾ ತ್ರಿವಳಿ ತಲಾಕ್‌ಗೆ ಬಲಿಪಶುವಾಗಿರುವುದು ಗಮನಾರ್ಹವಾಗಿದೆ. 
 
ಕಳೆದ ರವಿವಾರದಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ತ್ರಿವಳಿ ತಲಾಕ್ ಇದೊಂದು ಸಾಮಾಜಿಕ ಅನ್ಯಾಯ. ಇಂತಹ ಅನ್ಯಾಯವನ್ನು ಸಮಾಜವನ್ನು ಜಾಗೃತಗೊಳಿಸುವ ಮೂಲಕ ತಡೆಯಬಹುದಾಗಿದೆ. ಇದೊಂದು ಕಾರಣಕ್ಕೆ ಬಿಜೆಪಿ ಪಕ್ಷ, ಮುಸ್ಲಿಂ ಸಮುದಾಯದಲ್ಲಿ ಒಡಕು ಉಂಟು ಮಾಡಲು ಬಯಸುವುದಿಲ್ಲ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ