ತ್ರಿವಳಿ ತಲಾಖ್: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪಿನಲ್ಲಿ ಏನಿದೆ?

ಮಂಗಳವಾರ, 22 ಆಗಸ್ಟ್ 2017 (10:20 IST)
ನವದೆಹಲಿ: ಕೊನೆಗೂ ದೇಶವೇ ಎದುರು ನೋಡುತ್ತಿರುವ ಐತಿಹಾಸಿಕ ತೀರ್ಪು ಹೊರ ಬಿದ್ದಿದೆ. ಪಂಚ ಧರ್ಮಕ್ಕೆ ಸೇರಿದ ನ್ಯಾಯಮೂರ್ತಿಗಳ ಪೀಠ ತ್ರಿವಳಿ ತಲಾಖ್ ಬಗ್ಗೆ ತೀರ್ಪು ನೀಡಿದ್ದಾರೆ.

 
ಮುಖ್ಯ ನಾಯಮೂರ್ತಿ ಜೆಎಸ್ ಖೆಹರ್ ನೇತೃತ್ವದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ. ಕಿಕ್ಕಿರಿದ ಕೋರ್ಟ್ ಹಾಲ್ ನಲ್ಲಿ ತೀರ್ಪು ಓದಿದ ನ್ಯಾ. ಖೆಹರ್, ತ್ರಿವಳಿ ತಲಾಖ್ ಕಾನೂನು ವ್ಯಾಪ್ತಿಗೆ ತರಬೇಕೆಂದು ತೀರ್ಪು ನೀಡಿದೆ.

ಹೀಗಾಗಿ ಇನ್ನು ಮುಂದೆ, ತ್ರಿವಳಿ ತಲಾಖ್ ಕೂಡಾ ಸಂವಿಧಾನಿಕ ಚೌಕಟ್ಟಿನಲ್ಲಿ ಬರಲಿದೆ. ತಲಾಖ್ ಕುರಿತು ಸಂಸತ್ತಿನಲ್ಲಿ ಕಾನೂನು ಜಾರಿಗೆ ತರಬೇಕು ಎಂದು ಕೋರ್ಟ್ ಸಲಹೆ ನೀಡಿದೆ. ಅಲ್ಲದೆ, ತ್ರಿವಳಿ ತಲಾಖ್ ನ ಸಿಂಧುತ್ವವನ್ನು ಕೋರ್ಟ್ ಎತ್ತಿ ಹಿಡಿದಿದೆ.

ಸುಪ್ರೀಂ ಕೋರ್ಟ್ ಸಂಪೂರ್ಣವಾಗಿ ತ್ರಿವಳಿ ತಲಾಖ್ ನ್ನು ನಿಷೇಧಿಸಿಲ್ಲ. ಆದರೆ ಇದನ್ನು ಕಾನೂನಿನ ವ್ಯಾಪ್ತಿಗೆ ತರಲು ಸಂಸತ್ತಿಗೆ ಅಧಿಕಾರ ನೀಡಲಾಗಿದೆ. ಇನ್ನು ಮುಂದೆ, ಇದು ಕಾನೂನಿನ ವ್ಯಾಪ್ತಿಗೆ ಬರಲಿದೆ ಎಂದು ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ.

ನೊಂದ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ನಿಷೇಧಿಸಬೇಕೆಂದು ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು. ಅದರಂತೆ ಮೇ ತಿಂಗಳಲ್ಲಿ ವಿಚಾರಣೆ ಪೂರ್ಣಗೊಂಡಿತ್ತು. ಆ ಸಂದರ್ಭದಲ್ಲಿ ಇಂದಿನ ದಿನಕ್ಕೆ ತೀರ್ಪು ಕಾದಿರಿಸಲಾಗಿತ್ತು. ಅದರಂತೆ ಇದೀಗ ತೀರ್ಪು ಹೊರಬಿದ್ದಿದೆ. ಅಲ್ಲದೆ, ತ್ರಿವಳಿ ತಲಾಖ್ ಗೆ 6 ತಿಂಗಳ ನಿಷೇಧ ಹೇರಲಾಗಿದೆ.

ಇದನ್ನೂ ಓದಿ.. ವಿರಾಟ್ ಕೊಹ್ಲಿಯನ್ನು ಹೊರಗಟ್ಟಲು ಇಂಗ್ಲೆಂಡ್ ನಾಯಕ ಅಲೆಸ್ಟರ್ ಕುಕ್ ಸಜ್ಜು
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ