ನಾಳೆ ತ್ರಿವಳಿ ತಲಾಕ್ ಪ್ರಕರಣದ ಮಹತ್ವದ ತೀರ್ಪು

ಸೋಮವಾರ, 21 ಆಗಸ್ಟ್ 2017 (21:27 IST)
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಸಂವಿಧಾನ ಪೀಠ ನಾಳೆ ತ್ರಿವಳಿ ತಲಾಖ್ ಕುರಿತ ಮಹತ್ವದ ತೀರ್ಪು ನೀಡಲಿದೆ.  

6 ದಿನಗಳ ಮ್ಯಾರಥಾನ್ ವಿಚಾರಣೆ ಬಳಿಕ ಸುಪ್ರೀಂಕೋರ್ಟ್ ಮೇ 19ರಂದು ತೀರ್ಪನ್ನ ಆಗಸ್ಟ್ 22ಕ್ಕೆ ಕಾಯ್ದಿರಿಸಿತ್ತು. ಕೊನೆಯ ವಾದದ ದಿನದಂದು ಸುಪ್ರೀಂಕೋರ್ಟ್ ಮುಂದೆ ಪ್ರಮಾಣಪತ್ರ ಸಲ್ಲಿಸಿದ್ದ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್, ನಿಖಾಗೆ ಒಪ್ಪಿಗೆ ನೀಡುವ ಮುನ್ನವೇ ತ್ರಿವಳಿ ತಲಾಖ್ ಆಯ್ಕೆಯನ್ನ ಹೊರಗಿಡುವ ಅಧಿಕಾರವನ್ನ ಮಹಿಳೆಯರಿಗೆ ನೀಡಲು ಖಾಸಿಗಳಿಗೆ ಸಲಹೆ ನೀಡಲಾಗುವುದೆಂದು ತಿಳಿಸಿತ್ತು.

ತ್ರಿಬಳಿ ತಲಾಖ್ ಮತ್ತು ಮುಸ್ಲಿಂ ಮಹಿಳೆಯರ ಹಕ್ಕು ಕುರಿತಾದ ಸಾಲು ಸಾಲು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಬಂದ ಹಿನ್ನೆಲೆಯಲ್ಲಿ ತ್ರಿವಳಿ ತಲಾಖ್ ಸಾಂವಿಧಾನಿಕ ಮಾನ್ಯತೆ ಕುರಿತಂತೆ ತೀರ್ಮಾನ ಕೈಗೊಳ್ಳಲು ಸಂವಿಧಾನ ಪೀಠವನ್ನ ರಚಿಸಲಾಗಿತ್ತು.,

ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್, ಜಸ್ಟೀಸ್ ಕುರಿಯನ್ ಜೋಸೆಫ್, ಜಸ್ಟೀಸ್ ರೋಹಿಂಟನ್ ಫಾಲಿ ನಾರಿಮನ್, ಜಸ್ಟೀಸ್ ಉದಯ್ ಉಮೇಶ್ ಲಲಿತ್ ಮತ್ತು ಜಸ್ಟೀಸ್ ಅಬ್ದುಲ್ ನಜೀರ್ ಅವರನ್ನೊಳಗೊಂಡ ಸಂವಿಧಾನ ಪೀಠ ಈ ಪ್ರಕರಣದ ವಿಚಾರಣೆ ನಡೆಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ