ಟ್ರಂಪ್‌ ಗೆ 36 ಕೋಟಿ ಡಾಲರ್‌ ದಂಡ

geetha

ಶನಿವಾರ, 17 ಫೆಬ್ರವರಿ 2024 (16:30 IST)
ಅಮೆರಿಕ  : ಡೊನಾಲ್ಡ್‌ ಟ್ರಂಪ್‌ ಗೆ ಸಂಬಂಧಿಸಿದ ಸಂಸ್ಥೆಗಳಿಗೆ ನಿರ್ಬಂಧವನ್ನೂ ವಿಧಿಸಲಾಗಿದ್ದು, ಮೂರು ವರ್ಷಗಳ ಕಾಲ ನ್ಯೂಯಾರ್ಕ್‌ ನಲ್ಲಿ  ಯಾವುದೇ ವಹಿವಾಟು, ಆಸ್ತಿ ಮಾರಾಟ, ಖರೀದಿ ನಡೆಸದಂತೆ ಡೊನಾಲ್ಡ್‌ ಟ್ರಂಪ್‌ ಮೇಲೆ ನಿಷೇಧ ಹೇರಲಾಗಿದೆ. 
 
ಯುಎಸ್‌ನ ಮಾಜಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗೆ ವಂಚನೆ ಪ್ರಕರಣದಲ್ಲಿ 36 ಕೋಟಿ ಡಾಲ ರ್‌ ದಂಡ ವಿಧಿಸಲಾಗಿದೆ. ಈ ಆದೇಶವನ್ನು ಓದುವ ವೇಳೆ ನ್ಯಾಯಾಧೀಶರಾದ ಅರ್ಥರ್‌ ಎಂಗೋರೊನ್‌ ಅವರು  ಟ್ರಂಪ್‌ ಕಡೆಗೆ ನೋಡಿ ಅಪಹಾಸ್ಯದ‌ ನಗೆ ನಕ್ಕಿರುವುದು  ಈಗ ವಿವಾದಕ್ಕೀಡಾಗಿದೆ. ಇದೊಂದು ಅನ್ಯಾಯ ಎಂದು ಟ್ರಂಪ್‌ ಬೆಂಬಲಿಗರು ಹುಯಿಲೆಬ್ಬಿಸಿದ್ದಾರೆ.ಈ ಆದೇಶವನ್ನು ಮೇಲಿನ ಕೋರ್ಟ್‌ ನಲ್ಲಿ ಪ್ರಶ್ನಿಸುವುದಾಗಿ ಡೊನಾಲ್ಡ್‌ ಟ್ರಂಪ್‌ ವಕೀಲರು ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ