ಹೈದರಾಬಾದ್ : ಸಾಮಾನ್ಯ ಯಾತ್ರಿಗಳಿಗೆ ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿಯು ಗುಡ್ ನ್ಯೂಸ್ ನೀಡಿದೆ. ಸಾಮಾನ್ಯರಿಗೂ ವೆಂಕಟೇಶ್ವರಸ್ವಾಮಿ ದೇವರ ದರ್ಶನ ಸುಲಭವಾಗಿ ಸಿಗಲೆಂದು ಪ್ರಮುಖ ನಿರ್ಧಾರವನ್ನು ಟಿಟಿಡಿ ಕೈಗೊಂಡಿದೆ.
ತಿರುಮಲದಲ್ಲಿ ಶನಿವಾರ ಸಭೆ ನಡೆಸಿದ ಮಂಡಳಿಯು, ಗಣ್ಯರಿಗಾಗಿ ಜಾರಿಯಲ್ಲಿದ್ದ ತಿರುಪತಿ ದೇವರ ದರ್ಶನ ಸಮಯದಲ್ಲಿ ಬದಲಾವಣೆ ಮಾಡಿದೆ. ಈವರೆಗೆ ಇದ್ದ ಬೆಳಗ್ಗೆ 5:30 ರ ಬದಲಾಗಿ ಗಣ್ಯರಿಗೆ 10 ಗಂಟೆಯಿಂದ ದರ್ಶನಕ್ಕೆ ಅವಕಾಶ ಕಲ್ಪಿಸಲು ಕ್ರಮವಹಿಸಲಾಗಿದೆ.
ಗಣ್ಯರು ದರ್ಶನ ಮುಗಿಸಿ ಬರುವವರೆಗೂ ಗಂಟೆಗಟ್ಟಲೆ ಸರತಿ ಸಾಲಿನಲ್ಲಿ ನಿಂತು ಕಾಯಬೇಕಿದ್ದ ಸಾಮಾನ್ಯ ಯಾತ್ರಾರ್ಥಿಗಳಿಗೆ ಶ್ರೀವಾರಿ ದರ್ಶನಕ್ಕೆ ಅನುವು ಮಾಡಿಕೊಡಲು ಈ ಬದಲಾವಣೆ ಮಾಡಲಾಗಿದೆ.
ಪ್ರಸಿದ್ಧ ವೆಂಕಟೇಶ್ವರ ದೇವಸ್ಥಾನವನ್ನು ನಿರ್ವಹಿಸುವ ಟಿಟಿಡಿ ಟ್ರಸ್ಟ್ ಬೋರ್ಡ್, ತಿರುಮಲ ಬೆಟ್ಟದ ಮೇಲಿನ ವಸತಿ ಹಂಚಿಕೆ ವ್ಯವಸ್ಥೆಯನ್ನು ತಿರುಪತಿಗೆ ಸ್ಥಳಾಂತರಿಸಲು ನಿರ್ಧರಿಸಿದೆ.