ಭೋಪಾಲ್ : ನಮೀಬಿಯಾದಿಂದ 8 ಚೀತಾಗಳು ಬಂದಿಳಿದ ತಿಂಗಳುಗಳ ಬಳಿಕ ದಕ್ಷಿಣ ಆಫ್ರಿಕಾದಿಂದ ಮತ್ತೆ 12 ಚೀತಾಗಳು ಭಾರತಕ್ಕೆ ಬಂದಿಳಿದಿವೆ.
ವಾಯು ಸೇನೆಯ ಅ-17 ಗ್ಲೋಬ್ಮಾಸ್ಟರ್ ವಿಮಾನದಲ್ಲಿ ದಕ್ಷಿಣ ಆಫ್ರಿಕಾದ 12 ಚೀತಾಗಳು ಮಧ್ಯಪ್ರದೇಶದ ಗ್ವಾಲಿಯರ್ ತಲುಪಿವೆ.
ಕಸ್ಟಮ್ಸ್ ಹಾಗೂ ಇತರ ಅನುಮತಿಗಳ ನಂತರ ಅವುಗಳನ್ನು ಎಂ-17 ಚಾಪರ್ಗಳಲ್ಲಿ ಸುಮಾರು ಕುನೊ ರಾಷ್ಟ್ರೀಯ ಉದ್ಯಾನವನಕ್ಕೆ ಸಾಗಿಸಲಾಗುತ್ತದೆ.
ಒಟ್ಟು 7 ಗಂಡು ಮತ್ತು 5 ಹೆಣ್ಣು ಚೀತಾಗಳು ದಕ್ಷಿಣ ಆಫ್ರಿಕಾದಿಂದ ಬಂದಿದ್ದು, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಮತ್ತು ಪರಿಸರ ಸಚಿವ ಭೂಪೇಂದರ್ ಯಾದವ್ ಅವರು ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಕ್ವಾರಂಟೈನ್ ಆವರಣಗಳಿಗೆ ಬಿಡುಗಡೆ ಮಾಡಲಿದ್ದಾರೆ.
ವಾತಾವರಣಕ್ಕೆ ಹೊಂದಿಕೊಂಡ ನಂತರ ಅವುಗಳನ್ನು ಮುಕ್ತವಾತಾವರಣಕ್ಕೆ ಬಿಡಲಾಗಿತ್ತು. ನಮೀಬಿಯಾದಿಂದ ಬಂದ ಚೀತಾಗಳು ಇದೀಗ ಬೇಟೆಯಾಡಲು ಆರಂಭಿಸಿದ್ದು ಶೀಘ್ರದಲ್ಲೇ ಚೀತಾ ಪ್ರವಾಸೋದ್ಯಮ ಆರಂಭಿಸುವ ಮುನ್ಸೂಚನೆಯನ್ನು ಅರಣ್ಯ ಇಲಾಖೆ ನೀಡಿದೆ.