Union Budget 2025: ನಿಮಗೆ 12 ಲಕ್ಷ ಆದಾಯವಿದ್ದರೆ ಟ್ಯಾಕ್ಸ್ ಎಷ್ಟು ಇಲ್ಲಿದೆ ವಿವರ

Krishnaveni K

ಶನಿವಾರ, 1 ಫೆಬ್ರವರಿ 2025 (15:06 IST)
ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬಜೆಟ್ ಮಂಡಿಸಿದ್ದು ಇದರಲ್ಲಿ ಆದಾಯ ತೆರಿಗೆ ಮಿತಿ ಹೆಚ್ಚಳ ಮಾಡಿ ಘೋಷಣೆ ಮಾಡಿದ್ದಾರೆ. ಅದರಂತೆ ನಿಮಗೆ ಸುಮಾರು 12 ಲಕ್ಷ ರೂ. ವಾರ್ಷಿಕ ಆದಾಯವದ್ದರೆ ಎಷ್ಟು ಟ್ಯಾಕ್ಸ್ ಇಲ್ಲಿದೆ ವಿವರ.

ಈ ಬಾರಿ ಬಜೆಟ್ ನಲ್ಲಿ 12 ಲಕ್ಷ ರೂ.ವರೆಗೆ ವಾರ್ಷಿಕ ಆದಾಯವಿದ್ದರೆ ತೆರಿಗೆಯಿಂದ ವಿನಾಯ್ತಿ ನೀಡಲಾಗಿದೆ. ಅಂದರೆ ನಿಮ್ಮ ವಾರ್ಷಿಕ 12 ಲಕ್ಷ ರೂ.ವರೆಗೆ ಇದ್ದರೆ ನಿಮಗೆ ತೆರಿಗೆ ಪಾವತಿ ಮಾಡಬೇಕಾಗಿಲ್ಲ ಎಂದು ಘೋಷಣೆ ಮಾಡಲಾಗಿದೆ.

ಇದಕ್ಕೆ ಮೊದಲು 10 ಲಕ್ಷ ರೂ.ವರೆಗೆ ಆದಾಯ ಇರುವವರಿಗೆ 50,000 ರೂ.ವರೆಗೆ ತೆರಿಗೆ ವಿಧಿಸಲಾಗುತ್ತಿತ್ತು. ಈಗ ಘೋಷಣೆ ಮಾಡಿರುವ ಪ್ರಕಾರ 10 ಲಕ್ಷ ರೂ.ವರೆಗೆ ಯಾವುದೇ ತೆರಿಗೆಯಿಲ್ಲ.  12 ಲಕ್ಷ ರೂ.ವರೆಗೆ ಆದಾಯವಿದ್ದರೆ ಶೂನ್ಯ ತೆರಿಗೆ ಇದೆ. 

ಇನ್ನು, ವಾರ್ಷಿಕ 15 ಲಕ್ಷ ರೂ. ಆದಾಯವಿದ್ದರೆ 45,000 ರೂ. ತೆರಿಗೆ ವಿಧಿಸಲಾಗುತ್ತದೆ. 24 ಲಕ್ಷ ರೂ.ವರೆಗೆ ವಾರ್ಷಿಕ ಆದಾಯವಿದ್ದರೆ 1.70 ಲಕ್ಷ ರೂ. ತೆರಿಗೆ ಅನ್ವಯವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ