ನವದೆಹಲಿ: ಕೇಂದ್ರ ಬಜೆಟ್ 2025 ರನ್ನು ನಿರ್ಮಲಾ ಸೀತಾರಾಮನ್ ಮಂಡಿಸಿದ್ದು ದೋಸ್ತಿ ಪಕ್ಷ ಜೆಡಿಯು ಆಡಳಿತದಲ್ಲಿರುವ ಬಿಹಾರಕ್ಕೆ ಭರಪೂರ ಕೊಡುಗೆ ನೀಡಲಾಗಿದೆ.
ಕಳೆದ ಮಧ್ಯಂತರ ಬಜೆಟ್ ನಲ್ಲೂ ಬಿಹಾರ ಮತ್ತು ಆಂಧ್ರಪ್ರದೇಶಕ್ಕೆ ಭರಪೂರ ಕೊಡುಗೆ ನೀಡಲಾಗಿತ್ತು. ಇದಾದ ಬಳಿಕ ತೆರಿಗೆ ಪಾಲು ಹಂಚಿಕೆಯಲ್ಲೂ ಬಿಹಾರಕ್ಕೆ ಭರ್ಜರಿ ಕೊಡುಗೆ ನೀಡಲಾಗಿತ್ತು. ಇದೀಗ ಪೂರ್ಣ ಬಜೆಟ್ ನಲ್ಲೂ ಬಿಹಾರ ಬಹುಪಾಲು ಬಾಚಿಕೊಂಡಿದೆ.
ಬಿಹಾರಕ್ಕೆ ಐಐಟಿ ಕಾಲೇಜು, ಮೆಡಿಕಲ್ ಕಾಲೇಜು, ಆಹಾರ ಸಂಸ್ಕರಣೆಗೆ ಹೆಚ್ಚಿನ ಅನುದಾನವನ್ನು ಕೊಡಲಾಗಿದೆ. ಬಿಹಾರದಲ್ಲಿ ಆಹಾರ ಸಂಸ್ಕರಣೆ ಘಟಕ ನಿರ್ಮಾಣ, ಮಖನಾ ರೈತರಿಗೆ ತರಬೇತಿ ಕೇಂದ್ರ, ಗ್ರೀನ್ ಫೀಲ್ಡ್ ಏರ್ ಪೋರ್ಟ್ ನಿರ್ಮಾಣ ಮಾಡಲು ಅನುದಾನ ನೀಡಲಾಗಿದೆ.
ಇದಲ್ಲದೆ ಬಿಹಾರದಲ್ಲಿ ಮೆಡಿಕಲ್ ಕಾಲೇಜು ಸೀಟು ಹೆಚ್ಚಳ, ಡೇ ಕೇರ್ ಕ್ಯಾನ್ಸರ್ ಸೆಂಟರ್ ಇತ್ಯಾದಿ ಭರಪೂರ ಕೊಡುಗೆ ಘೋಷಣೆ ಮಾಡಲಾಗಿದೆ. ಬಿಹಾರಕ್ಕೆ ಹೆಚ್ಚಿನ ಅನುದಾನ ಘೋಷಣೆ ಮಾಡುತ್ತಿದ್ದಂತೇ ವಿಪಕ್ಷ ಸಂಸದರು ಕೋಲಾಹಲವೆಬ್ಬಿಸುತ್ತಿದ್ದರು.