ಯುಪಿ ಚುನಾವಣೆ: ರಾಹುಲ್, ಅಖಿಲೇಶ್ ಜಂಟಿ ಪ್ರಚಾರ

ಶನಿವಾರ, 28 ಜನವರಿ 2017 (11:48 IST)
ಉತ್ತರಪ್ರದೇಶದಲ್ಲಿ ಚುನಾವಣಾ ಮೈತ್ರಿ ಮಾಡಿಕೊಂಡಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಮತ್ತು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಲಖನೌನಲ್ಲಿ ಭಾನುವಾರ ಜಂಟಿಯಾಗಿ ರೋಡ್ ಶೋ ನಡೆಸಲಿದ್ದಾರೆ. 
ಈ ಮೈತ್ರಿಯಿಂದ ಉತ್ತರ ಪ್ರದೇಶಕ್ಕೆ ಖುಷಿಯಾಗಿದೆ ಎಂಬ ಟ್ಯಾಗ್‌ಲೈನ್‌ನೊಂದಿಗೆ ಪ್ರಚಾರ ನಡೆಸಲಿರುವ ಉಭಯ ನಾಯಕರು ಮತ ಹಾಕಲು ಹೋದಾಗ ನಿಮ್ಮ ಆಯ್ಕೆ ಕೈ ಮತ್ತು ಎಸ್‌ಪಿಯಾಗಿರಲಿ ಎಂದು ಮನವಿ ಮಾಡಿಕೊಳ್ಳಲಿದ್ದಾರೆ. 
 
ಈ ರೋಡ್ ಶೋ ತಮ್ಮ ಮೈತ್ರಿಯ ಬಗ್ಗೆ ಜನರ ಅಭಿಪ್ರಾಯವೇನು ಎಂಬುದನ್ನು ತಿಳಿದುಕೊಳ್ಳಲು ಸಹ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಕ್ಕೆ ಸಹಕಾರಿಯಾಗಲಿದೆ. 
 
ಬಳಿಕ ನಾಯಕದ್ವಯರು ಜಂಟಿ ಪತ್ರಿಕಾಗೋಷ್ಠಿಯನ್ನು ಕೂಡ ನಡೆಸಲಿದ್ದಾರೆ. 
 
ಮೊದಲ ಹಂತದ ಚುನಾವಣೆಯ ಪೂರ್ವದಲ್ಲಿ ಅಖಿಲೇಶ್ ಮತ್ತು ರಾಹುಲ್ 14 ರ‍್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಕೈ ಮೂಲಗಳು ಸ್ಪಷ್ಟ ಪಡಿಸಿವೆ. ಕೆಲವೊಂದು ಕಡೆಗಳಲ್ಲಿ ಕನೌಜ್ ಸಂಸದೆ, ಅಖಿಲೇಶ್ ಪತ್ನಿ ಡಿಂಪಲ್ ಮತ್ತು ರಾಹುಲ್ ಸಹೋದರಿ ಪ್ರಿಯಾಂಕಾ ಗಾಂಧಿ ವಾದ್ರಾ ಸಹ ಇವರಿಬ್ಬರನ್ನು ಸೇರಿಕೊಳ್ಳುವ ಸಾಧ್ಯತೆಗಳಿವೆ. 

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ