ಉತ್ತರಾಖಂಡ್ ಅಗ್ನಿ ದುರಂತ: 1500 ಗ್ರಾಮಗಳ ಗ್ರಾಮಸ್ಥರು ಆತಂಕದಲ್ಲಿ

ಶನಿವಾರ, 30 ಏಪ್ರಿಲ್ 2016 (18:38 IST)
ಉತ್ತರಾಖಂಡ್ ರಾಜ್ಯದ ಅರಣ್ಯ ಪ್ರದೇಶದಲ್ಲಿ ಹೊತ್ತಿಕೊಂಡಿರುವ ಬೆಂಕಿ ಅನಾಹುತ 1500 ಗ್ರಾಮಗಳಿಗೂ ವಿಸ್ತರಿಸುವ ಸಾಧ್ಯತೆಗಳಿರುವುದರಿಂದ ಬೆಂಕಿಯನ್ನು ನಂದಿಸಲು ಹರಸಾಹಸ ಪಡಲಾಗುತ್ತಿದೆ.
 
ರಾಜ್ಯದ 50 ಪ್ರದೇಶಗಳಲ್ಲಿ ಅಗ್ನಿಶಾಮಕ ದಳ ವಾಹನಗಳನ್ನು ನಿಯೋಜಿಸಲಾಗಿದ್ದು, ಯಾವುದೇ ಪ್ರಾಣಹಾನಿ, ಆಸ್ತಿಹಾನಿಯಾಗದಂತೆ ನೋಡಿಕೊಳ್ಳಲು ಕೇಂದ್ರ ಸರಕಾರ ಮೂರು ಎನ್‌ಡಿಆರ್‌ಎಫ್ ತಂಡಗಳನ್ನು ರಾಜ್ಯಕ್ಕೆ ರವಾನಿಸಿದೆ ಎಂದು ಮೂಲಗಳು ತಿಳಿಸಿವೆ.
 
ನಿನ್ನೆ ರಾತ್ರಿ ಬೆಂಕಿಯ ಕೆನ್ನಾಲಿಗೆಗಳು ಗ್ರಾಮಕ್ಕೆ ಹತ್ತಿರವಾಗುತ್ತಿರುವುದು ಕಂಡ ಗ್ರಾಮಸ್ಥರು ರಾತೋ ರಾತ್ರಿ ಮನೆಗಳಿಂದ ಹೊರಬಂದು ಸುರಕ್ಷಿತ ತಾಣಗಳಿಗೆ ತಲುಪಿದ್ದಾರೆ.
 
ಎನ್‌ಡಿಆರ್‌ಎಫ್ 135 ಸಿಬ್ಬಂದಿಗಳು ಈಗಾಗಲೇ ಕಾರ್ಯೋನ್ಮುಖರಾಗಿದ್ದು ಆತಂಕಪಡುವ ಅಗತ್ಯವಿಲ್ಲ ಎಂದು ಎನ್‌ಡಿಆರ್‌ಎಫ್ ಮಹಾನಿರ್ದೇಶಕ ಗ್ರಾಮಸ್ಥರಿಗೆ ಅಭಯ ನೀಡಿದ್ದಾರೆ.
 
ಉತ್ತರಾಖಂಡ್ ರಾಜ್ಯದಲ್ಲಿ ಕಳೆದ ಫೆಬ್ರವರಿಯಿಂದ ನಡೆದ ಅಗ್ನಿ ದುರಂತಗಳಿಂದಾಗಿ 1900 ಹೆಕ್ಟೇರ್ ಅರಣ್ಯ ಭೂಮಿ ನಾಶವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.   

ವೆಬ್ದುನಿಯಾವನ್ನು ಓದಿ