ವಂದೇ ಭಾರತ್ : 2023ಕ್ಕೆ ಕೇಂದ್ರ ಬಜೆಟ್ನಲ್ಲಿ ಘೋಷಣೆ ಸಾಧ್ಯತೆ

ಭಾನುವಾರ, 27 ನವೆಂಬರ್ 2022 (09:13 IST)
ನವದೆಹಲಿ : ದೇಶದಲ್ಲಿ ಈಗಗಾಲೇ 5 ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಚಾಲನೆ ನೀಡಲಾಗಿದೆ. 2025-26ಕ್ಕೆ ಭಾರತಕ್ಕೆ ತಿರುವುಗಳಲ್ಲಿ ಮೋಟಾರ್ ಬೈಕ್ನಂತೆ ವಾಲುವ ಲಿಟ್ಟಿಂಗ್ ರೈಲು ಬರಲಿದೆ.

ಲಿಟ್ಟಿಂಗ್ ರೈಲು ಬಂದ ನಂತರ 100 ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಈ ತಂತ್ರಜ್ಞಾನ ಅಳವಡಿಸುವ ಯೋಜನೆಯನ್ನು ರೈಲ್ವೆ ಇಲಾಖೆ ಹಾಕಿಕೊಂಡಿದೆ.

ಈ ಬೆನ್ನಲ್ಲೇ ಮುಂಬರುವ 2023ರ ಕೇಂದ್ರ ಬಜೆಟ್ನಲ್ಲಿ ಭಾರತೀಯ ರೈಲ್ವೆಗೆ ಅತಿ ಹೆಚ್ಚು ಬಜೆಟ್ ಹಂಚಿಕೆ ಮಾಡಲಿದ್ದು, ಸುಮಾರು 300 ರಿಂದ 400 ವಂದೇ ಭಾರತ್ ಎಕ್ಸ್ಪ್ರೆಸ್ ರೈಲುಗಳನ್ನು ಘೋಷಿಸುವ ಸಾಧ್ಯತೆ ಇದೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿವೆ. 

ರೈಲ್ವೇ ಸಚಿವ ಅಶ್ವಿನಿ ವೈಷ್ಣವ್, 2024ರ ಮೊದಲ ತ್ರೈಮಾಸಿಕದಲ್ಲಿ ಸ್ಲೀಪರ್ ಕೋಚ್ಗಳೊಂದಿಗೆ ಮೊದಲ ವಂದೇ ಭಾರತ್ ರೈಲನ್ನು ಹೊರತರಲಾಗುವುದು ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ