ನಾಳೆ ಉಪರಾಷ್ಟ್ರಪತಿ ಚುನಾವಣೆ: ಬಹುತೇಕ ವೆಂಕಯ್ಯನಾಯ್ಡು ಆಯ್ಕೆ ಸಾಧ್ಯತೆ

ಶುಕ್ರವಾರ, 4 ಆಗಸ್ಟ್ 2017 (15:28 IST)
ನಾಳೆ ಉಪರಾಷ್ಟ್ರಪತಿ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು ಸಂಸತ್ ಸಂಪೂರ್ಣವಾಗಿ ಸಿದ್ದಗೊಂಡಿದೆ. ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಎಂ.ವೆಂಕಯ್ಯನಾಯ್ಡು ಬಹುತೇಕ ಆಯ್ಕೆಯಾಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
 
ನಾಳೆ ಸಂಸದರು ಸಂಸತ್ತಿನಲ್ಲಿ ಮತಚಲಾವಣೆ ಮಾಡಿದ ನಂತರ ಸಂಜೆಯ ವೇಳೆಗೆ ಮುಂದಿನ ಉಪರಾಷ್ಟ್ರಪತಿ ಯಾರು ಎನ್ನುವುದು ಬಹಿರಂಗವಾಗಲಿದೆ. 
 
ಎನ್‌ಡಿಎ ಮೈತ್ರಿಕೂಟಕ್ಕೆ ಲೋಕಸಭೆಯಲ್ಲಿ ಬಹುಮತವಿರುವುದರಿಂದ ಎನ್‌ಡಿಎ ಅಭ್ಯರ್ಥಿ ವೆಂಕಯ್ಯನಾಯ್ಡು ಸುಲಭವಾಗಿ ಜಯಗಳಿಸಲಿದ್ದಾರೆ ಎನ್ನಲಾಗುತ್ತಿದೆ. ವಿಪಕ್ಷಗಳು ಕೂಡಾ ಗೋಪಾಲ ಕೃಷ್ಣ ಗಾಂಧಿಯನ್ನು ಕಣಕ್ಕಿಳಿಸಿವೆ. 
 
ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ರಾಮಾನಾಥ್ ಕೋವಿಂದ್ ಅವರನ್ನು ಬೆಂಬಲಿಸಿದ್ದ ಜೆಡಿಯು ಮತ್ತು ಬಿಜೆಡಿ ಪಕ್ಷಗಳು ಉಪರಾಷ್ಟ್ರಪತಿ ಚುನಾವಣೆಯಲ್ಲಿ ವಿಪಕ್ಷಗಳ ಅಭ್ಯರ್ಥಿಯಾದ ಗಾಂಧಿಯವರನ್ನು ಬೆಂಬಲಿಸಲಿವೆ.
 
ಕಳೆದ ಕೆಲ ದಿನಗಳ ಹಿಂದೆ ಮಹಾಮೈತ್ರಿಕೂಟದೊಂದಿಗೆ ಮೈತ್ರಿ ಕಡಿದುಕೊಂಡು ಬಿಜೆಪಿ ತೆಕ್ಕೆಗೆ ಸೇರಿ ನೂತನ ಸರಕಾರ ಸ್ಥಾಪಿಸಿದ ಜೆಡಿಯು, ವಿಪಕ್ಷಗಳ ಅಭ್ಯರ್ಥಿಯಾದ ಪಶ್ಚಿಮ ಬಂಗಾಳದ ಮಾಜಿ ರಾಜ್ಯಪಾಲ, ಉಪರಾಷ್ಟ್ರಪತಿ ಅಭ್ಯರ್ಥಿ ಗಾಂಧಿಯವರನ್ನು ಬೆಂಬಲಿಸುವುದಾಗಿ ಘೋಷಿಸಿದೆ. 

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ