ಬೆಂಗಳೂರು: ಗೂಗಲ್ ಮ್ಯಾಪ್ ನಂಬಿ ನದಿಯಲ್ಲೇ ಬೈಕ್ ಚಲಾಯಿಸುತ್ತಾ ತೆರಳಿದ ಬೈಕ್ ಸವಾರನೊಬ್ಬನ ಮೈ ಝುಂ ಎನಿಸುವ ವಿಡಿಯೋ ಇಲ್ಲಿದೆ ನೋಡಿ.
ಇತ್ತೀಚೆಗಿನ ದಿನಗಳಲ್ಲಿ ಪ್ರತಿಯೊಬ್ಬರೂ ಗೂಗಲ್ ಮ್ಯಾಪ್ ಹಾಕಿಕೊಂಡು ತಾವು ಹೋಗಬೇಕಾದ ಸ್ಥಳಕ್ಕೆ ಹೋಗುವುದು ಮಾಮೂಲು. ಆದರೆ ಗೂಗಲ್ ಮ್ಯಾಪ್ ಕೆಲವೊಮ್ಮೆ ಕೈ ಕೊಡುವುದೂ ಇದೆ.
ಗೂಗಲ್ ಮ್ಯಾಪ್ ನಂಬಿ ಹಳ್ಳ, ಕೊಳ್ಳ ಸೇರಿದವರು, ಕಾಡು ದಾರಿ ಹಿಡಿದ ಘಟನೆಗಳನ್ನೂ ನಾವು ನೋಡಿದ್ದೇವೆ. ಇದೀಗ ಯುವಕನೊಬ್ಬ ಗೂಗಲ್ ಮ್ಯಾಪ್ ನಂಬಿಕೊಂಡು ಹೋಗಿ ನದಿಗೇ ಬೈಕ್ ಇಳಿಸಿದ ಮೈ ಝುಂ ಎನ್ನುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಯುವಕನೊಬ್ಬ ಗೂಗಲ್ ಮ್ಯಾಪ್ ಪ್ರಕಾರ ರಸ್ತೆಯಲ್ಲಿ ಮುಂದೆ ಸಾಗುತ್ತಿದ್ದರೆ ಮುಂದೆ ಸೇತುವೆ ಇನ್ನಷ್ಟೇ ನಿರ್ಮಾಣ ಹಂತದಲ್ಲಿರುತ್ತದೆ. ಇದನ್ನು ನೋಡಿ ಆತನಿಗೆ ಅದೇನು ಹುರುಪು ಬಂತೋ ಸೀದಾ ನದಿಗೇ ಬೈಕ್ ನುಗ್ಗಿಸಿ ದಾರಿ ಮಾಡಿಕೊಂಡು ಸೇತುವೆಯ ಇನ್ನೊಂದು ತುದಿ ಮುಟ್ಟಿದ್ದಾನೆ. ಈ ಸಂದರ್ಭದಲ್ಲಿ ಸುತ್ತಲಿದ್ದವರು ಜೋರಾಗಿ ಕಿರುಚಿಕೊಳ್ಳುತ್ತಾರೆ. ಆದರೂ ಆತ ಸುರಕ್ಷಿತವಾಗಿ ದಡ ಮುಟ್ಟುತ್ತಾನೆ. ಈ ವಿಡಿಯೋ ಇಲ್ಲಿದೆ ನೋಡಿ.