ಇಂದು ಉಪರಾಷ್ಟ್ರಪತಿ ಚುನಾವಣೆಗೆ ವೋಟಿಂಗ್
ಸಂಸತ್ ಭವನದಲ್ಲಿ ಬೆಳಗ್ಗೆ 10 ಗಂಟೆಯಿಂದ ಮತದಾನ ಆರಂಭವಾಗಲಿದ್ದು, ಸಂಜೆ 5 ಗಂಟೆಯವರೆಗೂ ಮತದಾನ ನಡೆಯಲಿದೆ. ಬಳಿಕ ಮತ ಎಣಿಕೆ ಕಾರ್ಯ ನಡೆಯಲಿದೆ. ಈ ಚುನಾವಣೆಯಲ್ಲಿ ಲೋಕಸಭೆ ಮತ್ತು ರಾಜ್ಯಸಭೆಯ 788 ಸಂಸದರು ಮತ ಹಕ್ಕು ವಿನಿಯೋಗಿಸಿಕೊಳ್ಳಲಿದ್ದಾರೆ.
ಎನ್ಡಿಎಗೆ ಸ್ಪಷ್ಟ ಮೆಜಾರಿಟಿ ಇರುವ ಕಾರಣ ಜಗದೀಪ್ ಧನ್ಕರ್ ಉಪರಾಷ್ಟ್ರಪತಿ ಆಗೋದು ಬಹುತೇಕ ಖಚಿತವಾಗಿದೆ. ಜಗದೀಪ್ ಧನ್ಕರ್ಗೆ ಎನ್ಡಿಎಯೇತರ ಪಕ್ಷಗಳಾದ ವೈಎಸ್ಆರ್ಸಿಪಿ, ಬಿಎಸ್ಪಿ, ಎಐಎಡಿಎಂಕೆ, ಬಿಜೆಡಿ, ಆರ್ಎಲ್ಜೆಪಿ ಬೆಂಬಲ ಪ್ರಕಟಿಸಿವೆ. ಹಿಗಾಗಿ 510ಕ್ಕೂ ಹೆಚ್ಚು ಮತಗಳು ಧನ್ಕರ್ಗೆ ಲಭಿಸುವ ಸಾಧ್ಯತೆಯಿದೆ.