ಮದ್ಯ ಖರೀದಿಸಲು ಹಣ ನೀಡದ ತಾಯಿಗೆ ಮಗ ಮಾಡಿದ್ದೇನು?
ರಾಮುಡು ಕುಡಿತದ ದಾಸನಾಗಿದ್ದು ಮದ್ಯ ಖರೀದಿಸಲು ತಾಯಿಯ ಬಳಿ ಹಣ ಕೇಳಿದ್ದಾನೆ. ತಾಯಿ ಹಣ ಕೊಡಲು ನಿರಾಕರಿಸಿದಾಗ ಕೋಪಗೊಂಡ ಆತ ಕುಡಗೋಲಿನಿಂದ ಶಿರಚ್ಚೇದನ ಮಾಡಿ ಪರಾರಿಯಾಗಿದ್ದಾನೆ.
ಹಿರಿಯ ಮಗ ತಾಯಿಯನ್ನು ನೋಡಲು ಬಂದಾಗ ತಾಯಿ ರಕ್ತ ಮಡುವಿನಲ್ಲಿ ಬಿದ್ದಿರುವುದು ಕಂಡಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಬಗ್ಗೆ ಆತ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ತಳಕ್ಕೆ ಬಂದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.