ಎಚ್ಚರಿಕೆ !ಸಾಮಾಜಿಕ ಜಾಲತಾಣಗಳಲ್ಲಿ ಚುನಾವಣಾ ಪ್ರಕ್ರಿಯೆಗಳನ್ನು ಟೀಕಿಸಿದರೆ ಶಿಕ್ಷೆ ಖಚಿತ
ಸೋಮವಾರ, 27 ಆಗಸ್ಟ್ 2018 (14:40 IST)
ನವದೆಹಲಿ : ಲೋಕಸಭೆಯ ಚುನಾವಣೆಗೆ ಇನ್ನು 9 ತಿಂಗಳು ಬಾಕಿ ಇದೆ. ಈ ನಡುವೆ ಇದೀಗಕೇಂದ್ರ ಸರ್ಕಾರದ ಚುನಾವಣಾ ಪ್ರಕ್ರಿಯೆಗಳನ್ನು ಟೀಕಿಸಲು ಸಾಮಾಜಿಕ ಜಾಲತಾಣಗಳನ್ನು ದುರ್ಬಳಕೆ ಮಾಡಿಕೊಳ್ಳುವವರ ವಿರುದ್ಧ ಸೂಕ್ತ ಕ್ರಮಕ್ಕೆ ಮುಂದಾಗಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಹಾಗೂ ನಿಂದನೆ ಹೇಳಿಕೆ, ಹಾಗೂ ದ್ವೇಷ ಹರಡುವ ಮಾಹಿತಿಗಳು ಹೆಚ್ಚಾಗಿ ಕಂಡುಬರುತ್ತಿದೆ. ಈ ಹಿನ್ನಲೆಯಲ್ಲಿ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ.
ಸಾಮಾಜಿಕ ತಾಣ ದುರ್ಬಳಕೆ ಮತ್ತು ಚುನಾವಣಾ ಆಯೋಗದ ನಿಯಮ ಪ್ರಕಾರ, ಸೈಬರ್ ಕ್ರೈಂ ಅಡಿ ಪ್ರಕರಣ ದಾಖಲಿಸಲು ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ