ರಾಜ್ಯದ 17 ಜಿಲ್ಲೆಗಳಲ್ಲಿ ಜಲಕ್ಷಾಮ

ಶುಕ್ರವಾರ, 17 ಮಾರ್ಚ್ 2023 (19:48 IST)
ರಾಜಧಾನಿ ಬೆಂಗಳೂರು ಸೇರಿ ರಾಜ್ಯದ 17 ಜಿಲ್ಲೆಗಳು ತೀವ್ರವಾದ ನೀರಿನ ತೊಂದರೆ ಅನುಭವಿಸಲಿವೆ ಎಂದು ‍ಪರಿಸರ ನಿರ್ವಹಣೆ ಹಾಗೂ ನೀತಿ ಸಂಶೋಧನೆ ಸಂಸ್ಥೆ ಎಚ್ಚರಿಕೆ ನೀಡಿದೆ. ಸಂಶೋಧಕರು ಜಿಲ್ಲಾ ಮಟ್ಟದ ಸರ್ಕಾರಿ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ್ದು, 20 ಅಂಶಗಳನ್ನು ಆಧಾರವಾಗಿಟ್ಟುಕೊಂಡು ಈ ವರದಿ ತಯಾರಿ ಮಾಡಿದ್ದಾರೆ. ಅಂತರ್ಜಲ ಲಭ್ಯತೆ, ಕಾಡು ಪ್ರದೇಶ, ಜನಸಾಂದ್ರತೆ, ದಿನ ಬಳಕೆಗೆ ನೀರಿನ ಬೇಡಿಕೆ, ಕೃಷಿ, ಜಾನುವಾರು ಹಾಗೂ ಕಾರ್ಖಾನೆ ಮುಂತಾದ ಅಂಶಗಳು ಹಾಗೂ ಸರಾಸರಿ ವಾರ್ಷಿಕ ಮಳೆ ಮತ್ತು ಹಲವು ದಶಕಗಳ ಉಷ್ಣಾಂಶಗಳನ್ನೆಲ್ಲ ಗಣನೆಗೆ ತೆಗೆದುಕೊಳ್ಳಲಾಗಿದೆ. ಭಾರೀ ಜಲಕ್ಷಾಮ ಎದುರಿಸಲಿರುವ ಜಿಲ್ಲೆಗಳ ಪೈಕಿ ಬೆಂಗಳೂರು ಗ್ರಾಮಾಂತರ ಮೊದಲ ಸ್ಥಾನದಲ್ಲಿದ್ದು ರಾಯಚೂರು. ಚಿಕ್ಕಬಳ್ಳಾಪುರ, ಕಲಬುರಗಿ, ಗದಗ, ಕೊಪ್ಪಳ, ಬಳ್ಳಾರಿ, ವಿಜಯಪುರ, ಬೀದರ್‌ ಹಾಗೂ ಬೆಳಗಾವಿ ಇದೆ. ಬೆಂಗಳೂರು 12ನೇ ಸ್ಥಾನದಲ್ಲಿದೆ. ನಂತರದ ಸ್ಥಾನಗಳಲ್ಲಿ ಕೋಲಾರ, ಬಾಗಲಕೋಟೆ, ದಾವಣಗೆರೆ, ಯಾದಗಿರಿ, ಚಿತ್ರದುರ್ಗ ಹಾಗೂ ತುಮಕೂರು ಇವೆ. ಇವುಗಳು ಭಾರೀ ಪ್ರಮಾಣದ ಜಲಕ್ಷಾಮ ಎದುರಿಸಲಿವೆ. ನೀರಿನ ಕೊರತೆ ಕಡಿಮೆ ಅನುಭವಿಸುವ ಜಿಲ್ಲೆಗಳ ಪೈಕಿ ಉಡುಪಿ ಮೊದಲ ಸ್ಥಾನದಲ್ಲಿದೆ. ನಂತರದ ಸ್ಥಾನದಲ್ಲಿ ಕ್ರಮವಾಗಿ ಉತ್ತರ ಕನ್ನಡ, ದಕ್ಷಿಣ ಕನ್ನಡ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ