ಗಾಂಧೀಜಿಯ ದೃಷ್ಟಿಕೋನದಿಂದ ದೇಶವು ದೂರ ಹೋಗುತ್ತಿದೆ. ಗಾಂಧಿಯವರ ತತ್ವ, ಸಿದ್ದಾಂತಗಳಿಗೆ ಸರಕಾರ ತಿಲಾಂಜಲಿ ನೀಡಿದೆ ಎಂದು ಆರೋಪಿಸಿ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಇಂದು ರಾಜ್‌ಘಾಟ್‌ನಲ್ಲಿ ಒಂದು ದಿನದ ಸಾಂಕೇತಿಕ ನಿರಶನ ಹಮ್ಮಿಕೊಂಡಿದ್ದಾರೆ.
ಗಾಂಧಿ ಜಯಂತಿ ಸಂದರ್ಭದಲ್ಲಿ ಮಹಾತ್ಮಾ ಗಾಂಧಿಯವರಿಗೆ ಗೌರವ ಸಲ್ಲಿಸಿದ ನಂತರ ಹಿರಿಯ ಗಾಂಧಿವಾದಿ ಹಜಾರೆ, ಒಂದು ದಿನದ ನಿರಶನ ಆರಂಭಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ,
"ಇಂದು ಅಕ್ಟೋಬರ್ 2, ಗಾಂಧಿ ಜಯಂತಿ ನಮ್ಮ ದೇಶವು ಸ್ವಾತಂತ್ರ್ಯ ಪಡೆದು 70 ವರ್ಷಗಳಾಗಿವೆ, ಆದರೆ, ಗಾಂಧಿಯವರು ನಮ್ಮ ದೇಶದ ಬಗ್ಗೆ ಕಂಡಿದ್ದ ಕನಸಿನಿಂದ ನಾವು ದೂರ ಹೋಗಿದ್ದೇವೆ, ಆದ್ದರಿಂದ, ನಾನು ಗಾಂಧೀಜಿಯವರ ಸಮಾಧಿಯ ಬಳಿ ನನ್ನ ಸತ್ಯಾಗ್ರಹವನ್ನು ಪ್ರಾರಂಭಿಸಿದ್ದೇನೆ ಎಂದು ಹಜಾರೆ ತಿಳಿಸಿದ್ದಾರೆ.