18 ವಸಂತಗಳನ್ನ ಪೂರೈಸಿದ ವೆಬ್ ದುನಿಯಾ ಜಾಲತಾಣ

ಶನಿವಾರ, 23 ಸೆಪ್ಟಂಬರ್ 2017 (09:32 IST)
ಸಂಪೂರ್ಣ 18 ವರ್ಷಗಳ ಹಿಂದೆ ಯಾರೂ ಯೋಚಿಸದಂತಹ ಪ್ರಯತ್ನವನ್ನ ವೆಬ್ ದುನಿಯಾ ಮಾಡಿತ್ತು. ಸೆಪ್ಟೆಂಬರ್ 23, 1999ರಲ್ಲಿ ವೆಬ್ ದುನಿಯಾ ಜಾಲತಾಣ ಆರಂಭವಾದಾಗ ಇದು "ವಿಶಾಲ ಜಗತ್ತಿನಲ್ಲಿ ಮೊದಲ ವೆಬ್ ಹಿಂದಿ ಪೋರ್ಟಲ್ ಆಗಿತ್ತು. ಅಂದು ಅತ್ಯುತ್ಸಾಹದಿಂದ ಆರಂಭವಾದ ವೆಬ್ ದುನಿಯಾ ಇವತ್ತು ದೊಡ್ಡ ಸಂಸ್ಥೆಯಾಗಿ ಬೆಳೆದಿದೆ. ಹಲವಾರು ಶಾಖೆಗಳು, ಸೇವೆಗಳ ಮೂಲಕ ಅಪಾರ ಪ್ರಮಾಣದ ಓದುಗರ ಬಳಗವನ್ನ ಹೊಂದಿದೆ.
 

 80 ದಶಕದಲ್ಲೇ ಭಾರತಕ್ಕೆ ಇಂಟರ್ನೆಟ್ ಕಾಲಿಟ್ಟರೂ ಆಗಸ್ಟ್ 15 1995ರಂದು ಅಧಿಕೃತವಾಗಿ ಬಳಕೆ ಆರಂಭವಾಯಿತು. ಬಿಎಸ್ಎನ್ಎಲ್ ಒಂದು ಗೇಟ್ ವೇ ಸೇವೆಯನ್ನ ಆರಂಭಿಸಿತು. ಅಂದಿನ ಕಾಲಕ್ಕೆ ಬೆರಳೆಣಿಕೆಯಷ್ಟು ಮಾತ್ರ ವೆಬ್ ಸೈಟ್`ಗಳಿದ್ದವು. ಇದ್ದ ವೆಬ್ ಸೈಟ್`ಗಳೆಲ್ಲ ಏಕರೂಪವಾಗಿ ಇಂಗ್ಲೀಷ್ ಭಾಷೆಯಲ್ಲೇ ಇದ್ದವು. ಹೀಗಿದ್ದರೂ ಆ ಸಂಕೋಲೆಗಳನ್ನು ಮುರಿಯಲು ಮತ್ತು ವೆಬ್ ಜಗತ್ತಿನಲ್ಲಿ ದಾರಿ ಮಾಡಿಕೊಳ್ಳಲು ಹಿಂದಿ ಭಾಷೆಗೆ ದೀರ್ಘಕಾಲ ಬೇಕಾಗಲಿಲ್ಲ.

ವೆಬ್ ದುನಿಯಾ ಆರಂಭದ ಬಳಿಕ ಕೆಲ ವರ್ಷಗಳ ಕಾಲ ಇಂಟರ್ನೆಟ್ ಜಾಲದಲ್ಲಿ ಏಕೈಕ ಹಿಂದಿ ಜಾಲತಾಣವಾಗಿ ಮೆರೆದಿತ್ತು. 18 ವರ್ಷಗಳ ನಂತರ, ಇಂದು ಭಾರತದ ಸ್ಥಳೀಯ ಭಾಷೆಗಳಲ್ಲೂ ಅಸಾಧಾರಣ ಉಪಸ್ಥಿತಿ ಹೊಂದಿದೆ. ಅನೇಕ ಭಾರತೀಯರಿಗೆ, ವೆಬ್ದುನಿಯಾ ತಮ್ಮ ಡೀಫಾಲ್ಟ್ ವೆಬ್ ಪೋರ್ಟಲ್ ಆಗಿದೆ. ಅನೇಕ ಅನಿವಾಸಿ ಭಾರತೀಯರಿಗೂ ಅವರ ಮೊದಲ ಆಯ್ಕೆಯ ಭಾರತೀಯ ಪೋರ್ಟಲ್.

ವೆಬ್ ದುನಿಯಾ ಪ್ರಯಾಣದ ದಿನಗಳನ್ನ ತಿರುವಿ ನೋಡಿದರೆ ಅದು ನಿಜಕ್ಕೂ ಕಠಿಣ ಹಾದಿ. ಹಿಂದಿಯ ಸಾಂಪ್ರದಾಯಿಕ ಓದುಗರನ್ನ ಜಾಲತಾಣಕ್ಕೆ ಸೆಳೆಯುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಬಹುತೇಕ ಭಾರತೀಯರಿಗೆ ಇಂಟರ್ನೆಟ್ ಎಂಬುದು ಗಗನಕುಸುಮವಾಗಿದ್ದ ಕಾಲವದು. ವೆಬ್ ದುನಿಯಾ ಸಿಇಓ ವಿನಯ್ ಚಟರ್ಜಿಯವರ ದೂರದೃಷ್ಟಿಯ ಫಲವಾಗಿ ವೆಬ್ ದುನಿಯಾ ಹಿಂದಿ ಪೋರ್ಟಲ್ ಅಸ್ತಿತ್ವಕ್ಕೆ ಬಂದಿತು. ಇದೀಗ, ಕನ್ನಡ, ತೆಲುಗು, ತಮಿಳು, ಮಲೆಯಾಳಂ, ಮರಾಠಿ, ಗುಜರಾತಿ, ಇಂಗ್ಲೀಷ್ ಸೇರಿದಂತೆ ದೇಶದ 8 ಭಾಷೆಗಳಲ್ಲಿ ಸುದ್ದಿ ಜಾಲತಾಣವಿದೆ.

ಸದಾ ಹೊಸ ಪ್ರಯತ್ನಗಳ ಮೂಲಕ ಓದುಗರನ್ನ ತಣಿಸುವ ವೆಬ್ ದುನಿಯಾ ಜಾಲತಾಣ ವಿಡಿಯೋ ನ್ಯೂಸ್, ವೆಬ್ ಎಡಿಟೋರಿಯಲ್, ಚಿತ್ರ ವಿಮರ್ಶೆಗಳು ಹೀಗೆ ಹತ್ತು ಹಲವು ನವ ಪ್ರಯತ್ನಗಳನ್ನ ಮಾಡಿದೆ. ಇದೀಗ, ಮೊಬೈಲ್ ಪೋರ್ಟಲ್`ನಲ್ಲಿ `ವೆಬ್ ರಿಪೋರ್ಟರ್' ಎಂಬ ಹೊಸ ಪರಿಕಲ್ಪನೆಯನ್ನ ನಿಮ್ಮ ಮುಂದಿಟ್ಟಿದೆ. ಇದರ ಮೂಲಕ ಓದುಗರು ತಮ್ಮ ಆಲೋಚನೆ, ಫೋಟೋ, ವಿಡಿಯೋಗಳನ್ನ ನಮ್ಮ ಜೊತೆ ಹಂಚಿಕೊಳ್ಳಬಹುದಾಗಿದೆ.

ಫೇಸ್ಬುಕ್, ಟ್ವಿಟ್ಟರ್, ಇನ್ ಸ್ಟಾಗ್ರಾಮ್, ಶೇರ್ ಚಾಟ್`ನಂತಹ ಜಾಲತಾಣಗಳಲ್ಲೂ ಲಕ್ಷ ಲಕ್ಷ ಓದುಗರ ಬಳಗ ಹೊಂದಿರುವ ವೆಬ್ ದುನಿಯಾ, ಯೂಟ್ಯೂಬ್`ನಲ್ಲಿ ಲಕ್ಷಕ್ಕೂ ಅಧಿಕ ಸಬ್ ಸ್ಕ್ರೈಬರ್ಸ್ ಹೊಂದಿದೆ. 5000 ಕ್ಕೂ ಅಧಿಕ ವಿಡಿಯೋಗಳು ಯೂಟ್ಯೂಬ್ ಚಾನಲ್`ನಲ್ಲಿ ಇಲ್ಲಿವೆ.

ಆತ್ಮೀಯ ಓದುಗರೇ ಇದೆಲ್ಲ ಸಾಧ್ಯವಾಗಿರುವುದು ನಿಮ್ಮಿಂದ,

ಇದೀಗ ವೆಬ್ ದುನಿಯಾ 18ನೇ ವರ್ಷಕ್ಕೆ ಕಾಲಿಟ್ಟಿದೆ. ನಿಮ್ಮ ಉಪಸ್ಥಿತಿಯಿಂದ ಮಾತ್ರ ನಾವು ನಮ್ಮ ಈ ಪಯಣ ಮುಂದುವರೆಸಲು ಸಾಧ್ಯ. ಇನ್ನುಮುಂದೆಯೂ ನಮ್ಮ ಕೆಲಸವನ್ನ ಯಶಸ್ವಿಯಾಗಿ ಮುಂದುವರೆಸುತ್ತೇವೆಂದು ಭರವಸೆ ನೀಡುತ್ತೇವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ