ಸಿಎಂ ಕೇಜ್ರಿವಾಲ್ ಮೇಲೆ ಖಾರದ ಪುಡಿ ಎರಚಿ ದಾಳಿ ಮಾಡುವ ಮೊದಲು ಆತ ಹೇಳಿದ್ದೇನು ಗೊತ್ತೇ?!

ಬುಧವಾರ, 21 ನವೆಂಬರ್ 2018 (08:32 IST)
ನವದೆಹಲಿ: ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ಮೇಲೆ ಸಚಿವಾಲಯದಲ್ಲೇ ಖಾರದ ಪುಡಿ ಎರಚಿದ ಆರೋಪಿ ಅದಕ್ಕೂ ಮೊದಲು ಹೇಳಿದ್ದೇನು ಗೊತ್ತೇ?

ನಿನ್ನೆ ಸಚಿವಾಲಯದಿಂದ ಊಟಕ್ಕೆ ತೆರಳುವಾಗ ಸಿಎಂ ಕೇಜ್ರಿವಾಲ್ ಮೇಲೆ ಆಗಂತುಕನೊಬ್ಬ ಖಾರದ ಪುಡಿ ಎರಚಿ ದಾಳಿ ಮಾಡಿದ್ದ. ಆರೋಪಿಯನ್ನು ದೆಹಲಿ ನಿವಾಸಿ ಅನಿಲ್ ಕುಮಾರ್ ಶರ್ಮಾ ಎಂದು ಗುರುತಿಸಲಾಗಿದ್ದು, ಈತನನ್ನು ತಕ್ಷಣವೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಆದರೆ ದಾಳಿಗೆ ಮೊದಲು ಈತ ಒಂದು ಗುಟ್ಕಾ ಪ್ಯಾಕೆಟ್ ನಲ್ಲಿ ಖಾರದ ಪುಡಿ ತುಂಬಿ ತಂದಿದ್ದ. ಅದನ್ನು ಒಂದು ಕೈಯಲ್ಲಿ ಹಿಡಿದು ಇನ್ನೊಂದು ಕೈಯಲ್ಲಿ ಸಿಎಂ ಕೇಜ್ರಿವಾಲ್‍ ಕಾಲು ಮುಟ್ಟಿ ನಮಸ್ಕರಿಸಲು ಹೋಗಿದ್ದ. ಅಲ್ಲದೆ, ನೀವೇ ನನ್ನ ಕೊನೆಯ ಭರವಸೆ ಎನ್ನುತ್ತಾ ನಮಸ್ಕರಿಸಲು ಹೋದಾಗ ಕೇಜ್ರಿವಾಲ್ ಆತನನ್ನು ಮೇಲೆತ್ತಲು ಪ್ರಯತ್ನಿಸಿದ್ದರು. ಈ ವೇಳೆ ಆತ ಖಾರದ ಪುಡಿ ಎರಚಿದ್ದ ಎನ್ನಲಾಗಿದೆ. ಆದರೆ ಇದೊಂದು ಗಂಭೀರ ಭದ್ರತಾ ಲೋಪ ಪ್ರಕರಣ ಎಂದು ಆಮ್ ಆದ್ಮಿ ಪಕ್ಷ ಬಣ್ಣಿಸಿದೆ. ಒಂದು ವೇಳೆ ಖಾರದ ಪುಡಿ ಬದಲು ಆತನ ಬಳಿ ಮಾರಕ ಆಯುಧಗಳಿದ್ದರೆ ಯಾರು ಜವಾಬ್ಧಾರಿಯಾಗುತ್ತಿದ್ದರು ಎಂದು ಎಎಪಿ ವಕ್ತಾರರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ