ಸಂಬಂಧ ಹೊಂದಲು ನಿರಾಕರಿಸಿದ ವಿವಾಹಿತ ಮಹಿಳೆಗೆ ವ್ಯಕ್ತಿ ಹೀಗಾ ಮಾಡೋದು?

ಶುಕ್ರವಾರ, 27 ನವೆಂಬರ್ 2020 (05:40 IST)
ಪುಣೆ : ಪ್ರಿಯತಮೆ ಬೇರೆಯೊಬ್ಬನನ್ನು ವಿವಾಹವಾಗಿದ್ದಕ್ಕೆ ಅಸಮಾಧಾನಗೊಂಡ ವ್ಯಕ್ತಿಯೊಬ್ಬ ಪ್ರಿಯತಮೆಯ ಮೇಲೆ ಆಸಿಡ್ ಎರಚಿದ ಘಟನೆ ಪುಣೆಯ ಪಾರ್ವತಿಗಾಂವ್ ಪ್ರದೇಶದಲ್ಲಿ ನಡೆದಿದೆ.

ಸಂತ್ರಸ್ತೆ ಮತ್ತು ಆರೋಪಿ ನೆರೆಹೊರೆಯವರಾಗಿದ್ದು, ಆರೋಪಿ ಸಂತ್ರಸ್ತೆಯನ್ನು ಪ್ರೀತಿಸುತ್ತಿದ್ದ. ಆದರೆ ಆಕೆಗೆ ಬೇರೆಯೊಬ್ಬರ ಜೊತೆ ಮದುವೆಯಾಗಿದೆ. ಇದರಿಂದ ಬೇಸರಗೊಂಡಿದ್ದ ವ್ಯಕ್ತಿ ಸಂತ್ರಸ್ತೆ ತವರು ಮನೆಗೆ ಬಂದಿದ್ದ ವೇಳೆ ಭೇಟಿ ಮಾಡುವಂತೆ ಹೇಳಿ ಅವಳ ಬಳಿ ತನ್ನ ಜೊತೆ ಸಂಬಂಧ ಹೊಂದುವಂತೆ ಕೇಳಿದ್ದಾನೆ. ಇದಕ್ಕೆ ಆಕೆ ನಿರಾಕರಿಸಿದಾಗ ಆಕೆಯ ಮುಖಕ್ಕೆ ಎಸಿಡ್ ಎರಚಿದ್ದಾನೆ.

ಇದರ ಪರಿಣಾಮ ಸಂತ್ರಸ್ತೆಗೆ ಸುಟ್ಟ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ