ಲಕ್ನೋ : ಒಂದೇ ಮನೆಯಲ್ಲಿ 5 ರೂಂನಲ್ಲಿ ಲೈಂಗಿಕ ದಂಧೆಯಲ್ಲಿ ತೊಡಗಿದ್ದ 5 ಜೋಡಿಗಳನ್ನು ಪೊಲೀಸರು ಬಂಧಿಸಿದ ಘಟನೆ ಉತ್ತರ ಪ್ರದೇಶದ ಹರ್ದೋಯಿ ಜಿಲ್ಲೆಯ ಅಬ್ದುಲಪುರವಾದಲ್ಲಿ ನಡೆದಿದೆ.
ಈ ಬಗ್ಗೆ ಮಾಹಿತಿ ತಿಳಿದ ಪೊಲೀಸರು ಮನೆಯ ಮೇಲೆ ದಾಳಿ ನಡೆಸಿದಾಗ ಮನೆಯ ಕೋಣೆಗಳಲ್ಲಿ ಅರೆಬೆತ್ತಲೆ ಸ್ಥಿತಿಯಲ್ಲಿ 5 ಜೋಡಿಗಳು ಕಂಡುಬಂದಿವೆ. ತಕ್ಷಣ ಪೊಲೀಸರು ಆ 10 ಜನರನ್ನು ಬಂಧಿಸಿದ್ದಾರೆ. ದಾಳಿಯ ವೇಳೆ ಸೆಕ್ಸ್ ದಂಧೆ ನಡೆಸುತ್ತಿದ್ದ ಮಹಿಳೆ ಪರಾರಿಯಾಗಿದ್ದಾಳೆ. ಆಕೆಯ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎನ್ನಲಾಗಿದೆ.
ಬಂಧಿತ 5 ಮಂದಿ ಪುರುಷರು ಗ್ರಾಹಕರಾಗಿದ್ದು, ಮಹಿಳೆಯರಲ್ಲಿ ಇಬ್ಬರು ಕೋಲ್ಕತ್ತಾ ಮೂಲದವರಾಗಿದ್ದು, ಮತ್ತೆ ಮೂವರು ಪರಾರಿಯಾದ ಆರೋಪಿ ಮಹಿಳೆ ಸಂಬಂಧಿಕರು ಎನ್ನಲಾಗಿದೆ.