ದಾಳಿಂಬೆ ಹಣ್ಣನ್ನು ಯಾವ ಸಮಯದಲ್ಲಿ ತಿಂದರೆ ಒಳ್ಳೆಯದು ಗೊತ್ತಾ?
ಮಂಗಳವಾರ, 3 ನವೆಂಬರ್ 2020 (08:27 IST)
ಬೆಂಗಳೂರು : ದಾಳಿಂಬೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಇದನ್ನು ಸರಿಯಾದ ಸಮಯದಲ್ಲಿ ತಿಂದರೆ ಮಾತ್ರ ಅದರಿಂದ ಆರೋಗ್ಯ ಲಾಭವಾಗುತ್ತದೆ, ಇಲ್ಲವಾದರೆ ಅದರಿಂದ ಅನಾರೋಗ್ಯ ಕಾಡುವ ಸಂಭವವಿರುತ್ತದೆ. ಹಾಗಾದ್ರೆ ದಾಳಿಂಬೆ ಹಣ್ಣನ್ನು ಯಾವ ಸಮಯದಲ್ಲಿ ತಿನ್ನಬೇಕು ಎಂಬುದನ್ನು ತಿಳಿಯೋಣ.
ಬೆಳಿಗ್ಗೆ ದಾಳಿಂಬೆ ಹಣ್ಣನ್ನು ಸೇವಿಸುವುದು ತುಂಬಾ ಉತ್ತಮ. ಇದರಲ್ಲಿ ಸಾಕಷ್ಟು ಸಕ್ಕರೆ ಮತ್ತು ಜೀವಸತ್ವಗಳಿವೆ, ಆದಕಾರಣ ಇದನ್ನು ಬೆಳಿಗ್ಗೆ ಸೇವಿಸಿದರೆ ನಿಮ್ಮ ಶಕ್ತಿ ಹೆಚ್ಚಾಗಿ ದಿನವಿಡೀ ನೀವು ಉಲ್ಲಾಸದಿಂದ ಇರಬಹುದು.
ದಾಳಿಂಬೆ ಹಣ್ಣನ್ನು ಮಧ್ಯಾಹ್ನ ಊಟದ ಬಳಿಕ ಸೇವಿಸಿದರೆ ತುಂಬಾ ಒಳ್ಳೇಯದು. ಇದು ನಿಮ್ಮ ಹಸಿವನ್ನು ನಿವಾರಿಸುತ್ತದೆ. ಇದರಿಂದ ನೀವು ರಾತ್ರಿ ಊಟ ಮಾಡುವ ತನಕ ಹಸಿವಿಲ್ಲದೆ ಇರಬಹುದು.
ಆದರೆ ದಾಳಿಂಬೆ ಹಣ್ಣನ್ನು ರಾತ್ರಿ ಸೇವಿಸಬಾರದು. ಯಾಕೆಂದರೆ ರಾತ್ರಿ ನಿಮ್ಮ ಜೀರ್ಣಶಕ್ತಿ ಕಡಿಮೆ ಇರುತ್ತದೆ. ಇದರಲ್ಲಿರುವ ಫೈಬರ್ ಜೀರ್ಣವಾಗಲು ಕಷ್ಟವಾಗುತ್ತದೆ. ಇದರಿಂದ ಹೊಟ್ಟೆಯ ಸಮಸ್ಯೆ ಕಾಡಬಹುದು ಮತ್ತು ದೇಹದಲ್ಲಿ ಕೊಬ್ಬು ಹೆಚ್ಚಾಗುತ್ತದೆ.