ಮಮತಾ ಬ್ಯಾನೆರ್ಜಿ ಊಸರವಳ್ಳಿ ಎಂದ ಕಾಂಗ್ರೆಸ್ ಮುಖ್ಯಸ್ಥ ಯಾರು ಗೊತ್ತಾ?

ಶುಕ್ರವಾರ, 3 ಆಗಸ್ಟ್ 2018 (15:34 IST)
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕಾಂಗ್ರೆಸ್ ಮುಖ್ಯಸ್ಥ ಅಧೀರ್ ರಂಜಾನ್ ಚೌಧರಿ  ಅವರು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನೆರ್ಜಿ ಅವರನ್ನು ಊಸರವಳ್ಳಿ ಎಂದು ಕರೆದಿದ್ದಾರೆ.


ದೆಹಲಿಯಲ್ಲಿ ಕಾಂಗ್ರೆಸ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಮಮತಾ ಬ್ಯಾನೆರ್ಜಿ ಅವರು ದೆಹಲಿಯಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ಅವರು ಮಮತಾ ಬ್ಯಾನೆರ್ಜಿ ಅವರನ್ನು ಬಣ್ಣ ಬದಲಿಸುವ ಊಸರವಳ್ಳಿ ಗೆ ಹೋಲಿಸಿದ್ದಾರೆ.


‘ಮಮತಾ ಪ್ರಧಾನಿ ಸೀಟಿನ ಆಕಾಂಕ್ಷಿ. ಅದಕ್ಕಾಗಿ ಅವರು ಊಸರವಳ್ಳಿಯಂತೆ ವರ್ತಿಸುತ್ತಿದ್ದಾರೆ. ಅಲ್ಲದೆ ಮಮತಾ ಟ್ರೋಜನ್ ಹಾರ್ಸ್ ರೀತಿ ವರ್ತಿಸುತ್ತಿದ್ದಾರೆ. ವಿರೋಧ ಪಕ್ಷಗಳ ಒಕ್ಕೂಟವನ್ನು ಒಡೆಯುವುದು ಅವರ ಪ್ರಯತ್ನ. ಮಮತಾ ಸರ್ವಾಧಿಕಾರಿಯಾಗಿದ್ದು ಆಕೆಯ ಮಾತನ್ನು ಯಾರು ನಂಬ ಬಾರದು’ ಎಂದು ಅಧೀರ್ ರಂಜಾನ್ ಚೌಧರಿ  ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ